Urdu   /   English   /   Nawayathi

ಕಾಂಗ್ರೆಸ್ ಪಕ್ಷಕ್ಕೆ ಸೇರಿದ 687 ಪೇಜ್, ಖಾತೆಗಳು ಡಿಲೀಟ್: ಫೇಸ್ ಬುಕ್

share with us

ನವದೆಹಲಿ: 01 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಶಾಕ್ ನೀಡಿದೆ. ಕಾಂಗ್ರೆಸ್ ನ ಐಟಿ ಸೆಲ್ ನೊಂದಿಗೆ ಗುರುತಿಸಿಕೊಂಡಿದ್ದ ಬರೊಬ್ಬರಿ 687 ಪೇಜ್ ಹಾಗೂ ಖಾತೆಗಳನ್ನು ತೆಗೆದು ಹಾಕಿರುವುದಾಗಿ ಫೇಸ್ ಬುಕ್ ಏ.1 ರಂದು ಘೋಷಿಸಿದೆ. ನಕಲಿ ಫೇಸ್ ಬುಕ್ ಖಾತೆಗಳ ವಿರುದ್ಧ ಈಗಾಗಲೇ ಸಂಸ್ಥೆ ಸಮರ ಸಾರಿದ್ದು, ಇಂತಹ ಹಲವು ಖಾತೆಗಳನ್ನು ಫೇಸ್ ಬುಕ್ ಡಿಲೀಟ್ ಮಾಡುತ್ತಿದೆ. ಕಾಂಗ್ರೆಸ್ ನೊಂದಿಗೆ  ಗುರುತಿಸಿಕೊಂಡಿದ್ದ 687 ಖಾತೆಗಳು ಪೇಜ್ ಗಳು ನಕಲಿಯಾಗಿದ್ದರಿಂದ ಅವುಗಳನ್ನು ತೆಗೆದುಹಾಕಲಾಗಿದೆ. ಇದಷ್ಟೇ ಅಲ್ಲದೇ ಪಾಕಿಸ್ತಾನ ಮೂಲದ 103 ಪೇಜ್ ಹಾಗೂ ಗ್ರೂಪ್ ಗಳನ್ನು ಫೇಸ್ ಬುಕ್ ಹಾಗೂ ಇನ್ಸ್ಟಾ ಗ್ರಾಮ್ ನಿಂದ ತೆಗೆದುಹಾಕಲಾಗಿದೆ ಎಂದು ಸಂಸ್ಥೆ ತಿಳಿಸಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا