Urdu   /   English   /   Nawayathi

ಬಿಹಾರದಲ್ಲಿ ಚಪ್ರ-ಸೂರತ್ ಎಕ್ಸ್ ಪ್ರೆಸ್ ರೈಲು ಅಪಘಾತ; ನಾಲ್ವರಿಗೆ ಗಾಯ

share with us

ಪಾಟ್ನಾ: 31 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಚಪ್ರ-ಸೂರತ್ ತಪ್ತಿ ಗಂಗಾ ಎಕ್ಸ್ ಪ್ರೆಸ್ ರೈಲಿನ ಬೋಗಿ ಭಾನುವಾರ ಬಿಹಾರದ ಸರನ್ ಜಿಲ್ಲೆಯಲ್ಲಿ ಹಳಿ ತಪ್ಪಿ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸೂರತ್ ಮೂಲದ ರೈಲು ಚಪ್ರ ಜಂಕ್ಷನ್ ನಿಂದ ಹೊರಟ ಕೆಲವೇ ಹೊತ್ತಿನಲ್ಲಿ ರೈಲು ಅಪಘಾತ ವಾರಣಾಸಿ ವಿಭಾಗದ ಗೌತಮ್ ಅಸ್ತನ್ ರೈಲ್ವೆ ನಿಲ್ದಾಣ ಸಮೀಪ ಬೆಳಗ್ಗೆ 9.45ರ ಸುಮಾರಿಗೆ ನಡೆದಿದೆ. ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ಈಶಾನ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಜಯ್ ಯಾದವ್ ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا