Urdu   /   English   /   Nawayathi

ಪಾಕ್‍ಗೆ ಭಾರತ ಮತ್ತು ಅಮೆರಿಕ ಮತ್ತೊಮ್ಮೆ ವಾರ್ನಿಂಗ್

share with us

ವಾಷಿಂಗ್ಟನ್: 31 ಮಾರ್ಚ್ (ಫಿಕ್ರೋಖಬರ್ ಸುದ್ದಿ) ತನ್ನ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರು ಮತ್ತು ಉಗ್ರಗಾಮಿ ಬಣಗಳ ವಿರುದ್ಧ ಪಾಕಿಸ್ತಾನವು ಪರಿಣಾಮಕಾರಿ ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯತೆಯನ್ನು ಭಾರತ ಮತ್ತು ಅಮೆರಿಕ ಮತ್ತೊಮ್ಮೆ ಒತ್ತಿ ಹೇಳಿದೆ. ವಾಷಿಂಗ್ಟನ್‍ನಲ್ಲಿ ನಿನ್ನೆ ಮುಕ್ತಾಯವಾದ ಅಮೆರಿಕ-ಭಾರತ ಭಯೋತ್ಪಾದನೆ ಜಂಟಿ ಕಾರ್ಯನಿರ್ವಹಣೆ ಸಮೂರು ಮತ್ತು ನಿಯೋಜನೆಗಳ ಕುರಿತ ಮಾತುಕತೆ ವೇಳೆ ಉಭಯ ದೇಶಗಳು ಅಂತಾರಾಷ್ಟ್ರೀಯ ಭಯೋತ್ಪಾದನೆ ಸಂಘಟನೆಗಳಿಂದ ಎದುರಾಗುತ್ತಿರುವ ಆತಂಕಗಳ ಬಗ್ಗೆ ಚರ್ಚಿಸಿದವು. ವಿದೇಶಾಂಗ ಇಲಾಖೆಯ ಭಯೋತ್ಪಾದನೆ ನಿಗ್ರಹ ಸಂಚಾಲಕ ರಾಯಭಾರಿ ನಾಥನ್ ಸೇಲ್ಸ್ ನೇತೃತ್ವದ ಅಮೆರಿಕ ನಿಯೋಗ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಹಾವೀರ್ ಸಿಂಘ್ವಿ ನಾಯಕತ್ವದ ಭಾರತೀಯ ನಿಯೋಗ ಈ ಚರ್ಚೆಯಲ್ಲಿ ಭಾಗವಹಿಸಿತ್ತು. ಉಗ್ರರು ಮತ್ತು ಭಯೋತ್ಪಾದನೆ ಸಂಘಟನೆಗಳ ವಿರುದ್ಧ ಅರ್ಥಪೂರ್ಣ, ಪರಿಣಾಮಕಾರಿ ಮತ್ತು ಪರಿಶೀಲನೆ ನಡೆಸಬಹುದಾದ ರೀತಿಯಲ್ಲಿ ಪಾಕಿಸ್ತಾನ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ತುರ್ತು ಅಗತ್ಯದೆ ಎಂದು ಭಾರತ ಮತ್ತು ಅಮೆರಿಕ ಪ್ರತಿಪಾದಿಸಿವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ, ಸಂ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا