Urdu   /   English   /   Nawayathi

ಹೊತ್ತಿ ಉರಿದ ಖಾಸಗಿ ಬಸ್‌

share with us

ಹಾವೇರಿ: 30 ಮಾರ್ಚ್ (ಫಿಕ್ರೋಖಬರ್ ಸುದ್ದಿ) ನಿಂತಿದ್ದ ಖಾಸಗಿ ಡಿಲಕ್ಸ್‌ ಬಸ್ಸೊಂದು ಒಮ್ಮೆಲೇ ಧಗಧಗ ಉರಿದು ಭಸ್ಮವಾದ ಘಟನೆ ಶುಕ್ರವಾರ ಮಧ್ಯಾಹ್ನ ನಗರದ ಕಾಗಿನೆಲೆ ರಸ್ತೆಯ ಮುರುಘಾಮಠ ಬಳಿ ಸಂಭವಿಸಿದೆ. ಬಸ್‌ಗೆ (ಪಿವೈ.-01 ಸಿಎಫ್‌ 1989) ಬೆಂಕಿ ಹೊತ್ತಿಕೊಂಡಾಗ ಬಸ್‌ನಲ್ಲಿ ಪ್ರಯಾಣಿಕರು, ಚಾಲಕ, ನಿರ್ವಾಹಕರು ಇರಲಿಲ್ಲ. ಹೀಗಾಗಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್‌ನೊಳಗಿನ ವಯರ್‌ಗಳಿಂದ ಉಂಟಾದ ಶಾರ್ಟ್‌ ಸರ್ಕ್ನೂಟ್‌ ಈ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗಿದೆ. ತಕ್ಷಣ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದರು. ಬಸ್‌ ಪ್ರತಿದಿನ ಸಂಜೆ 7 ಗಂಟೆಗೆ ಮಂಗಳೂರಿಗೆ ಹೋಗುತ್ತಿತ್ತು. ಮಂಗಳೂರಿನಿಂದ ಬೆಳಗ್ಗೆ ಬಂದ ನಂತರ ಪ್ರಯಾಣಿಕರನ್ನು ಇಳಿಸಿ, ನಿತ್ಯ ಇದೇ ಸ್ಥಳದಲ್ಲಿ ನಿಲ್ಲಿಸಲಾಗುತ್ತಿತ್ತು. ಮಧ್ಯಾಹ್ನದ ಬಿಸಿಲಿನ ಪ್ರಖರತೆ ಜತೆಗೆ ಬಸ್‌ಗೆ ಬಿದ್ದ ಬೆಂಕಿಯಿಂದ ಸುತ್ತಲಿನ ವಾತಾವರಣ ಹೊಗೆಯಿಂದ ತುಂಬಿ ಆತಂಕ ಮೂಡಿಸಿತು. ಐದು ವರ್ಷಗಳ ಹಿಂದೆ ಇಲ್ಲಿಗೆ ಸಮೀಪದ ಕುಣಿಮೆಳಳ್ಳಿ ಬಳಿ ಚಲಿಸುತ್ತಿದ್ದ ವೋಲ್ವೋ ಬಸ್‌ಗೆ ರಾತ್ರಿ ಬೆಂಕಿ ಹೊತ್ತಿಕೊಂಡು ಬಸ್‌ ಉರಿದು ಭಸ್ಮವಾಗಿತ್ತು. ಆ ಸಂದರ್ಭದಲ್ಲಿ ಆರು ಜನ ಸಜೀವ ದಹನವಾಗಿದ್ದರು.

ಉ, ವಾ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا