Urdu   /   English   /   Nawayathi

ವಂಚಕ ನೀರವ್​ ಮೋದಿಗೆ ಸೇರಿದ್ದ ಕಲಾಕೃತಿಗಳು ದಾಖಲೆ ಮೊತ್ತಕ್ಕೆ ಮಾರಾಟ

share with us

ಮುಂಬೈ: 27 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಪಂಜಾಬ್ ನ್ಯಾಷನಲ್ ಬ್ಯಾಂಕ್​ನಿಂದ ಸುಮಾರು 14 ಸಾವಿರ ಕೋಟಿ ರೂ. ಸಾಲ ಪಡೆದು ವಂಚಿಸಿ ಪಲಾಯನಗೈದ ವಜ್ರೋದ್ಯಮಿ ನೀರವ್ ಮೋದಿಗೆ ಸೇರಿದ್ದ ಅಮೂಲ್ಯ ಕಲಾಕೃತಿಗಳನ್ನು ಆದಾಯ ತೆರಿಗೆ ಇಲಾಖೆ ಹರಾಜಿನಲ್ಲಿ ಮಾರಾಟ ಮಾಡಿದೆ. ಕೋರ್ಟ್​ನ ಆದೇಶದ ಮೇರೆಗೆ ಸರ್ಕಾರಿ ತನಿಖಾ ಸಂಸ್ಥೆಗಳು ನೀರವ್​ಗೆ ಸೇರಿದ್ದ ಕಲಾಕೃತಿಗಳನ್ನು ಜಪ್ತಿ ಮಾಡಿದ್ದು, ಮುಂಬೈನಲ್ಲಿ ಅದನ್ನು ಹರಾಜಿಗೆ ಇಡಲಾಗಿತ್ತು. ಆದಾಯ ತೆರಿಗೆ ಇಲಾಖೆಯು ತೆರಿಗೆ ಪುನರ್ ಪಾವತಿ ಅಧಿಕಾರಿಯ ಪರವಾಗಿ 68 ವರ್ಣಚಿತ್ರಗಳನ್ನು ಹರಾಜು ಹಾಕಿ 59.37 ಕೋಟಿ ಪಡೆದಿದೆ. ಪಿಎನ್​ಬಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ನೀರವ್​, ಜಾರಿ ನಿರ್ದೇಶನಾಲಯ ಅವರಿಂದ ವಶಕ್ಕೆ ಪಡೆದು, ಈ ವರ್ಣಚಿತ್ರಗಳನ್ನು ಹರಾಜು ಮಾಡಲು ಇಲಾಖೆಯು ನ್ಯಾಯಾಲಯದ ಅನುಮತಿ ಕೇಳಿದ್ದು ಅನುಮತಿ ಸಿಕ್ಕ ಬಳಿಕ ಈ ಹರಾಜು ನಡೆದಿದೆ. ನೀರವ್ ಮೋದಿಯನ್ನು ಲಂಡನ್​ನಲ್ಲಿ ಕಳೆದ ವಾರವಷ್ಟೇ ಬಂಧಿಸಿದ್ದು, ಅವರ ಜಾಮೀನು ಅರ್ಜಿ ಸಹ ತಿರಸ್ಕೃತಗೊಂಡಿದೆ. ಮುಂದಿನ ವಿಚಾರಣೆಯು ಮಾರ್ಚ್ 29ಕ್ಕೆ ನಿಗದಿಯಾಗಿದ್ದು, ಲಂಡನ್ ಕಾರಾಗೃಹದಲ್ಲಿ ಸಾಮಾನ್ಯ ಖೈದಿಗಳ ಜೊತೆಗೆ ನೀರವ್‌ ಮೋದಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا