Urdu   /   English   /   Nawayathi

'ಪಿಎನ್‌ಬಿ'ಗೆ 2 ಕೋಟಿ ದಂಡ ವಿಧಿಸಿದ ಆರ್​ಬಿಐ

share with us

ನವದೆಹಲಿ: 27 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಹಣಕಾಸು ವಹಿವಾಟು ಮಾಹಿತಿಯ ವಿನಿಮಯದ ಸುರಕ್ಷಿತ ನಿಯಮಗಳನ್ನು ಪಾಲಿಸದ ಪ್ರಯುಕ್ತ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ (ಪಿಎನ್​ಬಿ) 2 ಕೋಟಿ ದಂಡ ವಿಧಿಸಿದೆ. ಜಾಗತಿಕ ಅಂತರ್​​ ಬ್ಯಾಂಕ್ ಹಣಕಾಸು ದೂರ ಸಂಪರ್ಕ ಸಂಸ್ಥೆಯು (ಎಸ್​ಡಬ್ಲ್ಯೂಐಎಫ್​ಟಿ: ಸ್ವಿಫ್ಟ್​) ಬ್ಯಾಂಕ್​ಗಳಲ್ಲಿ ಜರುಗುವ ಹಣಕಾಸು ವಹಿವಾಟಿನ ಮಾಹಿತಿಯನ್ನು ಪರಸ್ಪರ ವಿನಿಮಯಕ್ಕೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಪರ್ಕ ಜಾಲ ಕಲ್ಪಿಸುತ್ತದೆ. ಇದನ್ನು ಪಿಎನ್​ಬಿ ಕಟ್ಟುನಿಟ್ಟಾಗಿ ಪಾಲಿಸದೇ ಇರುವುದಕ್ಕೆ ಆರ್​ಬಿಐ ದಂಡ ವಿಧಿಸಿದೆ. ಇಂತಹ ನಿಯಮ ಉಲ್ಲಂಘಿಸಿದ್ದ 36 ಬ್ಯಾಂಕ್​ಗಳಿಗೆ ಆರ್​ಬಿಐ ಈಗಾಗಲೇ ₹ 71 ಕೋಟಿ ದಂಡ ಹಾಕಿತ್ತು. ಇದರಲ್ಲಿ ಸರ್ಕಾರಿ ಸ್ವಾಮ್ಯದ, ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ, ಮತ್ತು ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್‌ ಐಸಿಐಸಿಐ ಬ್ಯಾಂಕ್‌ ಸೇರಿದಂತೆ ಬ್ಯಾಂಕ್‌ ಆಫ್‌ ಬರೋಡಾ, ಕೆನರಾ ಬ್ಯಾಂಕ್​, ಎಚ್​ಎಸ್​ಬಿಸಿ, ಸಿಟಿ ಯೂನಿಯನ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ, ಯೆಸ್‌ ಬ್ಯಾಂಕ್‌ ಒಳಗೊಂಡಿದ್ದವು. ‘ಸ್ವಿಫ್ಟ್‌’ನ ಏಷ್ಯಾ ಪೆಸಿಫಿಕ್‌ನ ಸಿಇಒ ಅಲೈನ್‌ ರಯೆಸ್‌ ಮಾತನಾಡಿ, ಬ್ಯಾಂಕ್‌ಗಳ ದೈನಂದಿನ ಕಾರ್ಯವೈಖರಿ ಮೇಲೆ ನಿಗಾ ಇರಿಸುವುದು ನಮ್ಮ ಕೆಲಸವಲ್ಲ. ಬ್ಯಾಂಕ್‌ಗಳಲ್ಲಿನ ನ್ಯೂನತೆಗಳು ಗಂಭೀರ ಸ್ವರೂಪದ್ದಲ್ಲ ಎನ್ನುವ ಬ್ಯಾಂಕ್‌ಗಳ ಧೋರಣೆ ಬಗ್ಗೆ ಪ್ರತಿಕ್ರಿಯಿಸಲು ಸಹ ನಿರಾಕರಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا