Urdu   /   English   /   Nawayathi

ಬಿಜೆಪಿಯ ಬೆದರಿಕೆ ರಾಜಕಾರಣ ಮತ್ತೊಮ್ಮೆ ಸಾಬೀತು, ಎಲ್ಲ ಮೈತ್ರಿ ಪಕ್ಷಗಳಿಗೂ ಇದು ಎಚ್ಚರಿಕೆ: ಗೋವಾ ಕಾಂಗ್ರೆಸ್

share with us

ಪಣಜಿ: 27 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಗೋವಾದಲ್ಲಿ ರಾತ್ರೋ ರಾತ್ರಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆ ಮತ್ತೊಂದು ಸುತ್ತಿನ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಈ ಬಗ್ಗೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಗೋವಾ ಕಾಂಗ್ರೆಸ್, ಬಿಜೆಪಿಯ ಬೆದರಿಕೆ ರಾಜಕಾರಣ ಮತ್ತೊಮ್ಮೆ ಸಾಬೀತು, ಎಲ್ಲ ಮೈತ್ರಿ ಪಕ್ಷಗಳಿಗೂ ಇದು ಎಚ್ಚರಿಕೆ ಕರೆಗಂಟೆ ಎಂದು ಹೇಳಿದೆ. ಬಿಜೆಪಿ ಮೈತ್ರಿ ಪಕ್ಷ ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಇದರ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೋವಾ ಕಾಂಗ್ರೆಸ್ ನ ಮುಖಂಡ ಸುನಿಲ್ ಕಾವ್ತಂಕರ್ ಅವರು, ಬಿಜೆಪಿ ಕರಾಳ ಮುಖ ಮತ್ತೊಮ್ಮೆ ಬಯಲಾಗಿದೆ. ಎಂಜಿಪಿ ಇಬ್ಬರು ಶಾಸಕರನ್ನು ಸೆಳೆಯುವ ಮೂಲಕ ಬಿಜೆಪಿ ಮತ್ತೊಮ್ಮೆ ತನ್ನ ಬೆದರಿಕೆ ರಾಜಕೀಯವನ್ನು ಮುಂದುವರೆಸಿದೆ. ನಿಜಕ್ಕೂ ಎಲ್ಲ ಮೈತ್ರಿ ಪಕ್ಷಗಳಿಗೂ ಇದು ಎಚ್ಚರಿಕೆಯ ಕರೆಗಂಟೆ ಎಂದು ಅವರು ಕಿಡಿಕಾರಿದ್ದಾರೆ.

View image on Twitter

ANI✔@ANI

Sunil Kawthankar,Goa Congress on merger of Maharashtrawadi Gomantak Legislative Party with BJP: BJP has proved it's a threat to all its allies. It's clear indication to all NDA partners before LS polls that partnership with BJP will be detrimental to existence of their own party.

43

4:45 AM - Mar 27, 2019

See ANI's other Tweets

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا