Urdu   /   English   /   Nawayathi

ಪೆಂಟಗನ್‍ಗೆ 1ಶತಕೋಟಿ ಡಾಲರ್ ವೆಚ್ಚದಲ್ಲಿ ‘ಟ್ರಂಪ್’ ಗಡಿಗೋಡೆ ..!

share with us

ವಾಷಿಂಗ್ಟನ್: 27 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಅಮೆರಿಕಾ-ಮೆಕ್ಸಿಕೊ ನಡುವೆ ಗಡಿಗೋಡೆ ನಿರ್ಮಿಸಬೇಕೆಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷೆಯ ಈಡೇರುವ ಕಾಲ ಸನ್ನಿಹಿತವಾಗಿದ್ದು ದೇಶದ ರಕ್ಷಣಾ ಇಲಾಖೆ-ಪೆಂಟಗನ್‍ಗೆ ಇದಕ್ಕಾಗಿ 1ಶತಕೋಟಿ ಡಾಲರ್ ವೆಚ್ಚ ಮಾಡುವ ಅಧಿಕಾರಿ ನೀಡಲಾಗಿದೆ. ಪೆಂಟಗನ್ ಉಸ್ತುವಾರಿ ಮುಖ್ಯಸ್ಥ ಪ್ಯಾಟ್ರಿಕ್ ಶಹನಹನ್ ವಾಷಿಂಗ್ಟನ್‍ನಲ್ಲಿ ಈ ವಿಷಯ ತಿಳಿಸಿದ್ದು, ಆತಂರಿಕ ಭದ್ರತಾ ಇಲಾಖೆಯು ತಮಗೆ ಗಡಿಗೋಡೆ ನಿರ್ಮಾಣಕ್ಕಾಗಿ 1ಶತಕೋಟಿ ಡಾಲರ್‍ಳನ್ನು ವಿನಿಯೋಗಿಸುವ ಅಧಿಕಾರ ನೀಡಿದೆ ಎಂದು ಹೇಳಿದರು ಮೆಕ್ಸಿಕೊದಿಂದ ಅಕ್ರಮ ವಲಸೆ ಮತ್ತು ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಅಮೆರಿಕಾ ಗಡಿಯಲ್ಲಿ ಗೋಡೆ ನಿರ್ಮಿಸಬೇಕೆಂಬ ಟ್ರಂಪ್ ಪ್ರಸ್ತಾವನೆಗೆ ಪರಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು. 92ಕಿ.ಮೀ. ಉದ್ದಕ್ಕೂ 18ಅಡಿ ಎತ್ತರದ ಗಡಿಗೋಡೆ ನಿರ್ಮಾಣ, ರಸ್ತೆಗಳ ಸುಧಾರಣೆ ಹಾಗೂ ದೀಪಗಳ ವ್ಯವಸ್ಥೆಗಾಗಿ ಈ ಹಣವನ್ನು ವ್ಯಯಿಸಲು ಪೆಂಟಗನ್‍ಗೆ ಅಧಿಕಾರ ನೀಡಲಾಗಿದ್ದು ಅಮೆರಿಕಾ ಸೇನಾ ಪಡೆ ಇಂಜಿನಿಯರ್‍ಗಳು ಈ ನಿರ್ಮಾಣ ಕಾರ್ಯವನ್ನು ಆರಂಭಿಸಲಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا