Urdu   /   English   /   Nawayathi

ನನ್ನ ಹಣ ತೆಗೆದುಕೊಂಡು ಜೆಟ್ ಏರ್ ವೇಸ್ ಉಳಿಸಿ: ಬ್ಯಾಂಕುಗಳಿಗೆ ವಿಜಯ್ ಮಲ್ಯ ಹೇಳಿಕೆ

share with us

ನವದೆಹಲಿ: 26 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಜೆಟ್ ಏರ್ ವೇಸ್ ವೈಮಾನಿಕ ಸಂಸ್ಥೆಯ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದಂತೆ ಎನ್ ಡಿಎ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಬ್ಯಾಂಕುಗಳು ದ್ವಿಮುಖ ನೀತಿ ಅನುಸರಿಸುತ್ತಿವೆ ಎಂದು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ವಾಗ್ದಾಳಿ ನಡೆಸಿದ್ದಾರೆ. ಸರಣಿ ಟ್ವಿಟ್ ಪ್ರಕಟಿಸಿರುವ ವಿಜಯ್ ಮಲ್ಯ, ಆರ್ಥಿಕ ನಷ್ಟದಲ್ಲಿರುವ ಜೆಟ್ ಏರ್ ವೇಸ್ ಸಂಸ್ಥೆಯ ಮೇಲ್ವಿಚಾರಣೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಜೆಟ್ ಏರ್ ವೇಸ್ ಉದ್ಯೋಗಗಳು, ಸಂಪರ್ಕತೆ ಮತ್ತು ಉದ್ಯಮಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಾರ್ವಜನಿಕ ಬ್ಯಾಂಕುಗಳು  ಆರ್ಥಿಕ ಸಮಸ್ಯೆಯನ್ನು ಬಗೆಹರಿಸಲಿವೆ ಎಂಬುದುನ್ನು ಸಂತೋಷದಿಂದ ನೋಡುತ್ತಿರುವುದಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಕಿಂಗ್ ಪಿಶರ್ ಮತ್ತು ಜೆಟ್ ಏರ್ ಲೈನ್ಸ್  ಕಂಪನಿಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಬೇರೆ ರೀತಿಯಲ್ಲಿ ನೋಡುತ್ತಿದೆ. ಕಿಂಗ್ ಪಿಶರ್ ಏರ್ ಲೈನ್ಸ್ ಸಂಸ್ಥೆ ಹಾಗೂ ಅಲ್ಲಿನ ಉದ್ಯೋಗಿಗಳನ್ನು ರಕ್ಷಿಸಲು 4 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿರುವುದಾಗಿ ವಿಜಯ್ ಮಲ್ಯ ಹೇಳಿದ್ದಾರೆ. ಸಾರ್ವಜನಿಕ ಬ್ಯಾಂಕುಗಳು ಹಾಗೂ ಇತರ ಬ್ಯಾಂಕುಗಳಿಂದ ಪಡೆದಿರುವ ಸಾಲ ಮರುಪಾವತಿಸಲು ಕರ್ನಾಟಕ ಹೈಕೋರ್ಟ್ ಮುಂದೆ ತನ್ನ ಆಸ್ತಿಯ ಒಟ್ಟು ಮೌಲ್ಯದ ಬಗ್ಗೆ ಮಾಹಿತಿ  ಇದ್ದು, ಬ್ಯಾಂಕುಗಳು ಏಕೆ ನನ್ನ ಹಣವನ್ನು ತೆಗೆದುಕೊಳ್ಳಬಾರದು ಇದರಿಂದ ಜೆಟ್ ಏರ್ ವೇಸ್ ಕಂಪನಿ ರಕ್ಷಿಸಲು ಸಾಧ್ಯವಾಗಲಿದೆ ಎಂದು ವಿಜಯ್ ಮಲ್ಯ ಕೇಳಿಕೊಂಡಿದ್ದಾರೆ.

Vijay Mallya✔@TheVijayMallya

And I repeat once again that I have placed liquid assets before the Hon’ble Karnataka High Court to pay off the PSU Banks and all other creditors. Why do the Banks not take my money. It will help them to save Jet Airways if nothing else.

1,447

5:32 AM - Mar 26, 2019

Twitter Ads info and privacy

617 people are talking about this

ಅಂದಾಜು 9 ಸಾವಿರ ಕೋಟಿ ಹಣ ವಂಚನೆ ಪ್ರಕರಣದಲ್ಲಿ ವಿಜಯ್ ಮಲ್ಯ ಲಂಡನ್ ನಲ್ಲಿದ್ದು, ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ಗೃಹ ಕಾರ್ಯದರ್ಶಿ ಅನುಮತಿ ನೀಡಿರುವುದನ್ನು ವಿರೋಧಿಸಿ ಅಲ್ಲಿನ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا