Urdu   /   English   /   Nawayathi

3 ಭಿನ್ನ ಕಕ್ಷೆಯ ಉಪಗ್ರಹಗಳನ್ನು ಉಡಾಯಿಸುವ ಪ್ರಪ್ರಥಮ ಪ್ರಯೋಗಕ್ಕೆ ಇಸ್ರೋ ಸಜ್ಜು

share with us

ಚೆನ್ನೈ: 25 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಅಂತರಿಕ್ಷದಲ್ಲಿ ಸೆಂಚುರಿ ಸೇರಿದಂತೆ ಹೊಸ ಕ್ರಮಗಳನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಗೆ ಸಜ್ಜಾಗಿದೆ. ಏ.1ರಂದು ಪಿಎಸ್‍ಎಲ್-ಸಿ5 ಗಗನನೌಕೆಯನ್ನು ಉಡಾವಣೆ ಮಾಡಲಿದೆ. ಮೂರು ಭಿನ್ನ ಕಕ್ಷೆ ಉಪಗ್ರಹಗಳನ್ನು ಸೇರಿಸುವ ಪ್ರಪ್ರಥಮ ಪ್ರಯೋಗ ಇದಾಗಿದೆ. ಪಿಎಸ್‍ಎಲ್-ಸಿ45 ಮೂಲಕ ಒಟ್ಟು 30 ಉಪಗ್ರಹಗಳು ನಭಕ್ಕೆ ಚಿಮ್ಮಲಿದೆ. ಸುಧಾರಿತ ವಿದ್ಯುಮಾನ ಬೇಹುಗಾರಿಕೆ ಉಪಗ್ರಹ -ಎಮಿಸ್ಯಾಟ್ ಸೇರಿದಂತೆ ಇತರ 29 ವಾಣಿಜ್ಯ ಉಪಗ್ರಹಗಳು ಉಡ್ಡಯನವಾಗಲಿದೆ. ಪಿಎಸ್‍ಎಲ್-ಸಿ45 ಮಾರ್ಚ್ 21ರಂದೇ ಉಡಾವಣೆಯಾಗಬೇಕಿತ್ತು. ಆಂತರಿಕ ತಾಂತ್ರಿಕ ವ್ಯವಸ್ಥೆ ಮತ್ತು ಇತರ ತಾಂತ್ರಿಕ ಕಾರಣಗಳಿಂದ ಉಡಾವಣೆ ವಿಳಂಬವಾಯಿತು ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ಪಿಎಸ್‍ಎಲ್-ಸಿ45 ಇಸ್ರೋದ ಪ್ರಥಮ ತ್ರಿ-ಕಕ್ಷೆ ಕಾರ್ಯಾಚರಣೆಯಾಗಿದೆ ಹಾಗೂ ಇದೇ ಮೊದಲ ಬಾರಿಗೆ ರಾಕೆಟ್‍ನ ನಾಲ್ಕನೆ ಹಂತದಲ್ಲಿ(ಪಿಎಸ್4) ಸೌರ ಘಟಕ ಬಳಸಲಾಗುತ್ತಿದೆ ಎಂದು ಶಿವನ್ ವರಿಸಿದ್ದಾರೆ. ಏಪ್ರಿಲ್ 1ರಂದು ಉಡ್ಡಯನವಾಗಲಿರುವ ಪಿಎಸ್‍ಎಲ್-ಸಿ45 ಮೂರು ಭಿನ್ನ ಕಕ್ಷೆಗಳಲ್ಲಿ ಉಪಗ್ರಹಗಳನ್ನು ಇರಿಸಲಿದೆ ಎಂದು ಕ್ರಮ ಸಾರಾಬಾಯಿ ಬಾಹ್ಯಾಕಾಶ ಕೇಂದ್ರ(ಎಸ್‍ಎಸ್ಸಿ)ದ ನಿರ್ದೇಶಕ ಎಸ್.ಸೋಮನಾಥ್ ಖಚಿತಪಡಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا