Urdu   /   English   /   Nawayathi

ಎಂದಿನಂತೆ ಮುಂದುವರಿಯಲಿದೆ ಓಲಾ‌ ಕಂಪನಿ ಸೇವೆ

share with us

ಬೆಂಗಳೂರು: 24 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಮೊಬೈಲ್‌ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದ ಓಲಾ ಕಂಪನಿ ಪರವಾನಗಿ ಅಮಾನತು ಆದೇಶ ಹಿಂಪಡೆಯಲು ಸರ್ಕಾರ ತೀರ್ಮಾನಿಸಿದ್ದು, ಆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ. ಇಂದಿನಿಂದ ಎಂದಿನಂತೆ ಓಲಾ‌ ಕಂಪನಿ ಕ್ಯಾಬ್‌ಗಳು ಓಡಾಡಲಿವೆ. ಆದಾಗ್ಯೂ ನೀತಿಗಳನ್ನು ಹೊಸ ತಂತ್ರಜ್ಞಾನದೊಂದಿಗೆ ತುರ್ತಾಗಿ  ಬದಲಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಜೊತೆಗೆ ಸರ್ಕಾರಗಳು ಹೊಸ ನೀತಿಗಳನ್ನು ಜಾರಿಗೊಳಿಸಲು  ಕೈಗಾರಿಕೆಗಳೂ ಸರ್ಕಾರದೊಟ್ಟಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ’ ಎಂದು ಸಚಿವರು ಟ್ವೀಟ್‌ ಮಾಡಿದ್ದಾರೆ. ಹೀಗಾಗಿ ಓಲಾ ಕಂಪನಿ ಕ್ಯಾಬ್‌ ಹಾಗೂ ಆಟೋಗಳು ಎಂದಿನಂತೆ ಓಡಾಟ ನಡೆಸಲಿವೆ.

Priyank Kharge✔@PriyankKharge

. @Olacabs will run their business as usual from today. However there is an urgent need for policies to catch-up with new technologies & also industries too should work closer with Govt to help evolve policies for innovations.

932

8:21 AM - Mar 24, 2019

Twitter Ads info and privacy

418 people are talking about this

ಸಾರಿಗೆ ಇಲಾಖೆಯು ಕಂಪೆನಿ ಪರವಾನಗಿಯನ್ನು ಮುಂದಿನ ಆರು ತಿಂಗಳವರೆಗೆ ಅಮಾನತು ಮಾಡಿದ್ದರಿಂದ ನಗರದಲ್ಲಿ ಓಲಾ ಕ್ಯಾಬ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಜೊತೆಗೆ ಪ್ರತಿಸ್ಪರ್ಧಿ ಕಂಪನಿಗಳ ಕ್ಯಾಬ್‌ ಬಳಕೆ ಹೆಚ್ಚಳವಾಗಿತ್ತು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا