Urdu   /   English   /   Nawayathi

ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಯುವತಿಯರ ಅಪಹರಣ,ವರದಿ ಕೇಳಿದ ಸುಷ್ಮಾ ಸ್ವರಾಜ್

share with us

ನವದೆಹಲಿ: 24 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಸಿಂಧ್ ಪ್ರಾಂತ್ಯದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಪರಿವರ್ತಿಸಲು ಇಬ್ಬರು ಹಿಂದೂ ಯುವತಿಯರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿನ ಭಾರತೀಯ ರಾಯಬಾರಿಯಿಂದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ವರದಿ ಕೇಳಿದ್ದಾರೆ.ಮಾಧ್ಯಮಗಳ ವರದಿಯನ್ನು ಟ್ವೀಟ್ ನಲ್ಲಿ ಟ್ಯಾಗ್ ಮಾಡಿರುವ ಸುಷ್ಮಾ ಸ್ವರಾಜ್ , ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ  ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮೀಷನರ್ ಅವರನ್ನು ಕೇಳಿದ್ದಾರೆ.ಮಾಧ್ಯಮ ವರದಿಗಳ ಪ್ರಕಾರ, ಸಿಂಧೂ ಪ್ರಾಂತ್ಯದ ಗೊಟ್ಕಿ ಜಿಲ್ಲೆಯ ಡಾರ್ಕಿ ಪಟ್ಟಣದಲ್ಲಿ ಹೋಳಿ ಹಬ್ಬದಂದು ಅಪಹರಣ ಪ್ರಕರಣ ನಡೆದಿದ್ದು, ಹಿಂದೂ ಸಮುದಾಯದವರು ಪ್ರತಿಭಟನೆ ನಡೆಸಿ, ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ  ಒತ್ತಾಯಿಸಿದ್ದಾರೆ. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದೌರ್ಜನ್ಯ ಸಮಸ್ಯೆಯನ್ನು ಭಾರತ ಪ್ರಸ್ತಾಪಿಸಿದೆ.

Chowkidar Sushma Swaraj✔@SushmaSwaraj

I have asked Indian High Commissioner in Pakistan to send a report on this. @IndiainPakistan
Two Hindu girls abducted on Holi eve in Pakistan's Sindh http://toi.in/tlMF9b/a24gk  via @TOIWorld

17.5K

8:37 AM - Mar 24, 2019

Twitter Ads info and privacy

Two Hindu girls abducted on Holi eve in Pakistan's Sindh - Times of India

Pakistan News: AMRITSAR: In a jolt to Imran Khan’s vision of a ‘Naya Pakistan’, two teenaged Hindu girls Raveena, 13, and Reena,15, were allegedly kidnapped and forc.

timesofindia.indiatimes.com

9,687 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا