Urdu   /   English   /   Nawayathi

ಸೋಲಿನ ಭಯವೋ? ಅಮೇಥಿಯಿಂದ ದಕ್ಷಿಣದತ್ತ ಮುಖ ಮಾಡಿದ ರಾಹುಲ್'; 'ಭಾಗ್ ರಾಹುಲ್ ಭಾಗ್' ಎಂದು ಸ್ಮೃತಿ ವ್ಯಂಗ್ಯ!

share with us

ನವದೆಹಲಿ: 24 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ವದಂತಿಯನ್ನೇ ಟೀಕಾಸ್ತ್ರವನ್ನಾಗಿ ಬಳಸಿಕೊಂಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಂಧಿ ಕಾಲೆಳೆದಿದ್ದಾರೆ. ಸ್ಮೃತಿ ಇರಾನಿ ತಮ್ಮ ಟ್ವೀಟ್ ನಲ್ಲಿ ಭಾಗ್ ರಾಹುಲ್ ಭಾಗ್(ಓಡು ರಾಹುಲ್ ಓಡು) ಎಂದು ಛೇಡಿಸಿದ್ದಾರೆ. ರಾಹುಲ್ ರನ್ನು ಅಮೇಥಿಯಿಂದ ಜನರು ಓಡಿಸಿದ್ದಾರೆ. ಜನರು ನಿಮ್ಮನ್ನು ತಿರಸ್ಕಾರ ಮಾಡಿದ್ದರಿಂದಲೇ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುತ್ತಾರೆಂದು ಪ್ರಹಸನ ಸೃಷ್ಟಿಯಾಗಿದೆ ಎಂದು ಕುಟುಕಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಅಮೇಥಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತ್ತಿದ್ದರು. ಈ ಬಾರಿಯೂ ಸ್ಮೃತಿ ಅಮೇಥಿಯಿಂದಲೇ ಸ್ಪರ್ಧಿಸುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಮಾತ್ರ ಈ ಬಾರಿ ಕರ್ನಾಟಕ, ತಮಿಳುನಾಡಿನಿಂದ ಸ್ಪರ್ಧಿಸುವಂತೆ ಬೇಡಿಕೆ ಇದೆ. ರಾಹುಲ್ ಅಮೇಥಿಯಿಂದಲೇ ಸ್ಪರ್ಧಿಸುತ್ತಾರೆಂದು ಕಳೆದ ತಿಂಗಳು ಕಾಂಗ್ರೆಸ್ ಸಹ ಹೇಳಿತ್ತು.

View image on Twitter

Chowkidar Smriti Z Irani@smritiirani

अमेठी ने भगाया,

जगह-जगह से बुलावे का स्वांग रचाया,

क्योंकि जनता ने ठुकराया।
सिंहासन खाली करो राहुल जी कि जनता आती है

29.6K

7:30 PM - Mar 23, 2019

15.2K people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا