Urdu   /   English   /   Nawayathi

ಮೊಜಾಂಬಿಕ್ ಚಂಡಮಾರುತದಲ್ಲಿ 200ಕ್ಕೂ ಹೆಚ್ಚು ಜನರ ರಕ್ಷಣೆ : ಭಾರತೀಯ ನೌಕಾಪಡೆ ಸಾಹಸ

share with us

ನವದೆಹಲಿ: 24 ಮಾರ್ಚ್ (ಫಿಕ್ರೋಖಬರ್ ಸುದ್ದಿ) ವಿನಾಶಕಾರಿ ಚಂಡಮಾರುತದಿಂದ ತತ್ತರಿಸಿರುವ ಮೊಜಾಂಬಿಕ್‍ನಲ್ಲಿ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆ 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿ, 1,382 ಸಂತ್ರಸ್ತರಿಗೆ ನೆರವು ನೀಡಿದೆ. ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ಮೇಲೆ ಮಾರ್ಚ್ 15ರಂದು ಅಪ್ಪಳಿಸಿ ಇಡಾಯಿ ಹೆಸರಿನ ಚಂಡಮಾರುತದಿಂದ ಮೊಜಾಂಬಿಕ್, ಜಿಂಬಾಬ್ವೆ ಮತ್ತು ಮಲವಿ ದೇಶಗಳಲ್ಲಿ ಅನೇಕ ಮಂದಿ ಸಾವಿಗೀಡಾಗಿ ವ್ಯಾಪಕ ಹಾನಿ ಸಂಭವಿಸಿತು. ಮೊಜಾಂಬಿಕ್ ಸರ್ಕಾರದ ಕೋರಿಕೆ ಭಾರತ ಸರ್ಕಾರ ನೌಕಾಪಡೆಯ ಹಡುಗುಗಳನ್ನು ಪ್ರಕೃತಿ ವಿಕೋಪ ಸಂತ್ರಸ್ತ ಪ್ರದೇಶಗಳಿಗೆ ರವಾನಿಸಿತು. ಅಲ್ಲಿ ಯುದ್ದೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಂಡ ಭಾರತೀಯ ನೌಕೆಗಳು ಈವರೆಗೆ 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿ, 1,381 ಜನರಿಗೆ ವೈದ್ಯಕೀಯ ಶಿಬಿರಗಳಲ್ಲಿ ನೆರವು ಒದಗಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ. ಭಾರತದ ಮೂರು ನೌಕೆಗಳು ಮೊಜಾಂಬಿಕ್‍ನ ಬಂದರು ನಗರಿ ಬೆರ್ರಾ ಕರಾವಳಿ ಪ್ರದೇಶದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಜರರನ್ನು ರಕ್ಷಿಸಿ, ಸಂತ್ರಸ್ತರಿಗೆ ನೀಡಿರುವ ನೆರವನ್ನು ಆಫ್ರಿಕಾ ರಾಷ್ಟ್ರ ಕೃತಜ್ಞತೆಯಿಂದ ಧನ್ಯವಾದ ಸಲ್ಲಿಸಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا