Urdu   /   English   /   Nawayathi

ರೈಲಿಗೆ ಬೆಂಕಿ: ಇಬ್ಬರ ಸಾವು

share with us

ಗುವಾಹಟಿ/ಜಲ್ಪೈಗುಡಿ: 23 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಚಂಡಿಗಡ–ದಿಬ್ರುಗಢ್‌ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹತ್ತಿಕೊಂಡಿರುವುದನ್ನು ಗಮನಿಸಿದ ಇಬ್ಬರು ಪ್ರಯಾಣಿಕರು ಆತಂಕದಿಂದ ಹೊರಗೆ ಜಿಗಿದು ಸಾವಿಗೀಡಾಗಿರುವ ಘಟನೆ ಶುಕ್ರವಾರ ನಡೆದಿದೆ.  ಪಶ್ಚಿಮ ಬಂಗಾಳದ ಚಟೆರ‍್ಹಟ್‌ ಮತ್ತು ನಿಜ್ಬಾರಿ ವಲಯದಲ್ಲಿ ಈ ಘಟನೆ ನಡೆದಿದೆ. ರೈಲಿಗೆ ಬೆಂಕಿ ಹತ್ತಿಕೊಂಡಿರುವ ಸುದ್ದಿ ಪ್ರಯಾಣಿಕರಲ್ಲಿ ಹರಡಿ ಆತಂಕ ಸೃಷ್ಟಿಸಿತು. ಇದರಿಂದ ದಿಢೀರನೆ ಇಬ್ಬರು ಪ್ರಯಾಣಿಕರು ಹೊರಗೆ ಜಿಗಿದು ಗಂಭೀರವಾಗಿ ಗಾಯಗೊಂಡರು. ಬಳಿಕ, ಇಬ್ಬರು ಸಾವಿಗೀಡಾದರು ಎಂದು ಅಧಿಕಾರಿಗಳು ತಿಳಿಸಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا