Urdu   /   English   /   Nawayathi

ಮುಸ್ಲಿಮರನ್ನು ಥಳಿಸಬೇಕೆಂದು ಯಾವ ಪವಿತ್ರ ಗ್ರಂಥದಲ್ಲಿ ಉಲ್ಲೇಖಿಸಿದೆ? ಮೋದಿಯಿಂದ ಹಿಟ್ಲರ್ ನಡೆ: ಕೇಜ್ರಿವಾಲ್

share with us

ನವದೆಹಲಿ: 23 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರ ಮೋದಿ ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಫ್​ ಹಿಟ್ಲರ್ ಹಾದಿಯಲ್ಲಿದ್ದಾರೆ. ಅಭಿಪ್ರಾಯ ಬೇಧಗಳನ್ನು ಅವರು ಹತ್ತಿಕ್ಕುತ್ತಿದ್ದಾರೆ, ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ. ಹಿಟ್ಲರ್​ನ ಗೂಂಡಾಗಳು ಅಮಾಯಕರ ಮೇಲೆ ದಾಳಿ ಮಾಡಿ ಕೊಲ್ಲುತ್ತಿದ್ದರು. ಹಿಟ್ಲರ್​ನ ಆಡಳಿತದಲ್ಲಿ ಸಂತ್ರಸ್ತರ ವಿರುದ್ಧವೇ ಪೊಲೀಸರು ಕೇಸು ದಾಖಲಿಸುತ್ತಿದ್ದರು. ಮೋದಿ ಕೂಡ ಹಾಗೇ ನಡೆದುಕೊಳ್ಳುತ್ತಿದ್ದಾರೆ. ಮೋದಿ ಹಿಟ್ಲರ್​ನ ಹಾದಿ ಹಿಡಿದಿದ್ದಾರೆ. ಆದರೆ, ಈ ದೇಶ ಯಾವ ಹಾದಿಯಲ್ಲಿ ಸಾಗುತ್ತಿದೆ ಎಂಬುದರ ಬಗ್ಗೆ ಮೋದಿ ಭಕ್ತರು ಮಾತ್ರ ಜಾಣ ಕುರುಡರಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಗುರುಗ್ರಾಮದ ಧಾಮಸ್​ಪುರದಲ್ಲಿ ಕುಟುಂಬವೊಂದರ ಮಕ್ಕಳು ಅವರ ಮನೆಯ ಎದುರೇ ಕ್ರಿಕೆಟ್​ ಆಡುತ್ತಿದ್ದರು. ಆದರೆ, ಅದಕ್ಕೆ ಅಡ್ಡಿಪಡಿಸಿದ ಸ್ಥಳೀಯರು ಪಾಕಿಸ್ತಾನಕ್ಕೆ ಹೋಗಿ ಆಡಿಕೊಳ್ಳಿ ಎಂದು ಮೂದಲಿಸಿದರು ಎನ್ನಲಾಗಿದೆ. ಇದಾದ ನಂತರವೂ ಮಕ್ಕಳು ಅಲ್ಲಿಯೇ ಆಟವಾಡುತ್ತಿದ್ದವು. ಇದರಿಂದ ರೊಚ್ಚಿಗೆದ್ದ ಸ್ಥಳೀಯ ಬಲಪಂಥೀಯ ಮನಸ್ಕರು ಕುಟುಂಬಸ್ಥರ ಮೇಲೆ ಹಾಕಿ ಸ್ಟಿಕ್​, ರಾ​ಗಳಿಂದ ಹಲ್ಲೆ ನಡೆಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ​ಆಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا