Urdu   /   English   /   Nawayathi

ಭಾರತದ ಕೋರಿಕೆ ಮೇರೆಗೆ ಲಂಡನ್‍ನಲ್ಲಿ ನೀರವ್ ಮೋದಿ ಬಂಧನ!

share with us

ನವದೆಹಲಿ: 20 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ನಂತರ ದೇಶ ಬಿಟ್ಟು ಪರಾರಿಯಾಗಿದ್ದ ವಜ್ರ ವ್ಯಾಪಾರಿ ನೀರವ್ ಮೋದಿಯನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ. ಪಿಎನ್ಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿಯನ್ನು ಗಡೀಪಾರು ಮಾಡುವಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿದ ಕೋರಿಕೆ ಮೇರೆಗೆ ಲಂಡನ್ ಕೋರ್ಟ್ ನೀರವ್ ಮೋದಿ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಲಂಡನ್ ಪೊಲೀಸರು ನೀರವ್ ಮೋದಿಯನ್ನು ಲಂಡನ್ನ ಹೊಲ್ಬರ್ನ್ ಮೆಟ್ರೋ ನಿಲ್ದಾಣದಲ್ಲಿ ಬಂಧಿಸಲಾಗಿದೆ. ದೇಶದ ಕಾನೂನಿನ ಕಣ್ಣಿಗೆ ಮಣ್ಣರೆಚಿ ತಲೆಮರೆಸಿಕೊಂಡಿರುವ ನೀರವ್ ಮೋದಿಯ ಗಡೀಪಾರಿಗೆ ಸಿಬಿಐ ಕೂಡ ಎಲ್ಲ ಪ್ರಯತ್ನಗಳನ್ನು ನಡೆಸಿತ್ತು. ನೀರವ್ ಮೋದಿ ವಿರುದ್ಧ ಜಾರಿ ಮಾಡಿದ ರೆಡ್ ಕಾರ್ನರ್ ನೋಟಿಸ್ ಗೆ ಯುನೈಟೆಡ್ ಕಿಂಗ್ ಡಂ ಸ್ಪಂದಿಸಿದೆ. 2018ರ ಜೂನ್ ನಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا