Urdu   /   English   /   Nawayathi

ಪಕ್ಷದಿಂದ ಹೊರನೂಕಲು ನಾನೇನು ನಾಯಿನಾ?: ಬಿಜೆಪಿ ವಿರುದ್ಧ ಸಂಸದ ಕಿಡಿ

share with us

ನವದೆಹಲಿ: 17 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಲೋಕಸಭೆ ಚುನಾವಣೆ ಸಮೀಪಿಸುತ್ತಲೇ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿದೆ. ಅಸ್ಸೋಂನ ಸಂಸದ ರಾಮ ಪ್ರಸಾದ್​ ಶರ್ಮಾ ಬಿಜೆಪಿ ತನಗೆ ಅವಮಾನ ಮಾಡಿದೆ ಎಂದು ಪಕ್ಷಕ್ಕೆ ಗುಡ್​ ಬೈ ಹೇಳಿದ್ದಾರೆ. ಈ ಬಗ್ಗೆ ಅಸ್ಸೋಂನ ಈಟಿವಿ ಭಾರತ್​ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ಬಿಜೆಪಿ ಹಾಗೂ ಆರ್​ಎಸ್​ಎಸ್​ ಬಲಗೊಳಿಸಲು ದಣಿವರಿಯದೆ ದುಡಿದಿದ್ದೇನೆ. ಆದರೆ ಈಗ ನನ್ನನ್ನು ದಿಢೀರನೆ ಪಕ್ಷ ದೂರ ಮಾಡಿತು.  ಹೊರ ನೂಕಲು ನಾನೇನು ನಾಯಿಯಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಗಾಗಿಯೇ ನನ್ನ ಕುಟುಂಬದ ಕಡೆಗೂ ಗಮನ ಹರಿಸಿರಲಿಲ್ಲ. ಕಳೆದ  ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 9ಸ್ಥಾನಗಳನ್ನು ಗೆಲ್ಲಲು ನಾನೇ ಕಾರಣ. ಪಂಚಾಯತ್​ ಚುನಾವಣೆಯಲ್ಲೂ ಬಿಜೆಪಿಯನ್ನು ಗೆಲ್ಲಿಸಿಕೊಟ್ಟೆ ಎಂದು ಹೇಳಿಕೊಂಡಿದ್ದಾರೆ. ತೇಜ್​ಪುರದಲ್ಲಿ ಹಾಲಿ ಸಂಸದರಾಗಿರುವ ರಾಮ್​ ಪ್ರಸಾದ್​ ಶರ್ಮಾರ ಬದಲಾಗಿ  ಹೇಮಂತ್​ ಬಿಸ್ವಾಸ್​ ಶರ್ಮಾರಿಗೆ ಬಿಜೆಪಿ  ಟಿಕೆಟ್​ ನೀಡಿದೆ. ಇದರಿಂದ ಕುಪಿತರಾಗಿರುವ ಶರ್ಮಾ, ಪಕ್ಷ ಕೇಳಿದ್ದರೆ ನನ್ನ ಸ್ಥಾನವನ್ನೇ ಬಿಟ್ಟು ಕೊಡುತ್ತಿದ್ದೆ. ಆದರೆ ಯಾವುದೇ ಮಾಹಿತಿ ನೀಡಿದೆ ಹೀಗೆ ಮಾಡಿದ್ದಾರೆ ಎಂದು ಗರಂ ಆಗಿದ್ದಾರೆ. ಸದ್ಯ ನನಗೆ ಟಿಎಂಸಿ, ಎನ್​ಪಿಪಿ ಹಾಗೂ ಕಾಂಗ್ರೆಸ್​ನಿಂದ ಕರೆಗಳು ಬಂದಿವೆ. ಈ ಬಾರಿ ಚುನಾವಣೆಗೆ ನಾನು ಸ್ಪರ್ಧಿಸುವುದಂತೂ ಖಚಿತ ಎಂದಿದ್ದಾರೆ. ಮೂಲಗಳಂತೆ ಅವರೀಗ ಕಾಂಗ್ರೆಸ್​ನಿಂದ ಸ್ಪರ್ಧಿಸುತ್ತಿದ್ದಾರೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا