Urdu   /   English   /   Nawayathi

ಪ್ರಿಯಾಂಕಾ ವಾದ್ರಾರಿಂದ ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಅಲುಗಾಡಿಸಲಾಗಲ್ಲ: ಯೋಗಿ ಆದಿತ್ಯನಾಥ್

share with us

ಲಖನೌ: 16 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಪ್ರಿಯಾಂಕಾ ವಾದ್ರಾ ರಾಜಕೀಯ ಪ್ರವೇಶದಿಂದ ಉತ್ತರಪ್ರದೇಶದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ರೀತಿಯಲ್ಲೂ ಹಿನ್ನಡೆಯಾಗಲ್ಲ. ಇನ್ನು ಎಸ್ಪಿ ಮತ್ತು ಬಿಎಸ್ಪಿ ಮೈತ್ರಿ ಸುಳ್ಳಿನ ಕರಗಂಟೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ಹಿಂದಿಯೂ ಪ್ರಿಯಾಂಕಾ ವಾದ್ರಾ ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಆದರೆ ಅದರಿಂದ ಯಾವುದೇ ರೀತಿಯ ಹಿನ್ನಡೆಯಾಗಲಿಲ್ಲ. ಇದೀಗ ಪ್ರಿಯಾಂಕಾರನ್ನು ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ದಾರೆ. ಇದು ಆಪಕ್ಷದಲ್ಲಿನ ಆಂತರಿಕ ವಿಚಾರ ಎಂದು ಹೇಳಿದ್ದಾರೆ. ಇನ್ನು ಉತ್ತರಪ್ರದೇಶದಲ್ಲಿ ಎಸ್ಪಿ ಹಾಗೂ ಬಿಎಸ್ಪಿ ಮೈತ್ರಿ ಮಾಡಿಕೊಂಡಿದೆ. ಆದರೆ ಒಳಗೆ ಜಗಳ ಶುರುವಾಗಿದೆ. ಇದು ಸುಳ್ಳಿನ ಕರಗಂಟೆ ಎಂದು ಲೋಕಸಭೆ ಚುನಾವಣಾ ಪ್ರಚಾರದ ವೇಳಾಪಟ್ಟಿ ಬಿಡುಗಡೆಯಾದ ಬಳಿಕ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿಕ ಪ್ರಿಯಾಂಕಾ ವಾದ್ರಾರನ್ನು ಕಾಂಗ್ರೆಸ್ ನ ಪ್ರಮುಖ ವ್ಯಕ್ತಿ ಎಂದು ಹೇಳಲಾಗುತ್ತಿತ್ತು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಗೆ ಬಲ ತುಂಬುವ ಸಲುವಾಗಿ ಪ್ರಿಯಾಂಕಾರನ್ನು ಕಾರ್ಯದರ್ಶಿಯನ್ನಾಗಿ ಮಾಡಲಾಗಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا