Urdu   /   English   /   Nawayathi

ನೀರವ್​ ಮೋದಿ ಪತ್ನಿಗೂ ಕಂಟಕ... ಜಾಮೀನು ರಹಿತ ವಾರೆಂಟ್​ ಜಾರಿ... ಆಗುತ್ತಾ ಬಂಧನ..!

share with us

ನವದೆಹಲಿ: 16 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಪಂಜಾಬ್ ನ್ಯಾಷನಲ್​ ಬ್ಯಾಂಕಿಗೆ ಮಾಡಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆ ಮರೆಸಿಕೊಂಡ ವಜ್ರೋದ್ಯಮಿ ನೀರವ್ ಮೋದಿ ಅವರ ಪತ್ನಿಗೆ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ. ಆರ್ಥಿಕ ಅಪರಾಧಗಳ ನೂತನ ಕಾಯ್ದೆಯಡಿ ಪಿಎನ್​ಬಿ ವಂಚನೆಯ ಪ್ರಮುಖ ಆರೋಪಿ ನೀರವ್‌ ಮೋದಿಯನ್ನು 'ತಲೆಮರೆಸಿಕೊಂಡ ಆರ್ಥಿಕ ಅಪರಾಧಿ' (ಪಿಎಂಎಲ್​​ಎ) ಎಂದು ಜಾರಿ ನಿರ್ದೇಶನಾಲಯ (ಇಡಿ) ಘೋಷಿಸಿತ್ತು. ಪತ್ನಿ ಅಮಿ ಮೋದಿ, '30 ದಶಲಕ್ಷ ಡಾಲರ್​ ವರ್ಗಾಯಿಸಿಕೊಳ್ಳಲು ಅಂತಾರಾಷ್ಟ್ರೀಯ ಬ್ಯಾಂಕ್ ಖಾತೆ ಬಳಸಿಕೊಂಡಿದ್ದಾರೆ' ಎಂದು ಶಂಕಿಸಿ ಪಿಎಂಎಲ್​​ಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಎಸ್​. ಅಝ್ಮಿ ಅವರು, 'ಆಪಾಧಿತೆಯ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್​ ಹೊರಡಿಸಿದ್ದಾರೆ'. ಈ ಹಣವನ್ನು ನ್ಯೂಯಾರ್ಕ್​ನ ಸೆಂಟರ್ ಪಾರ್ಕ್​ನಲ್ಲಿ ಆಸ್ತಿ ಖರೀದಿಸಲು ಬಳಸಿಕೊಂಡಿದ್ದಾರೆ. ಇದಕ್ಕೆ ಪೂರಕ ಸಾಕ್ಷಾಧಾರಗಳನ್ನು ಸಂಗ್ರಹಿಸಿ 48 ವರ್ಷದ ಅಮಿ ಮೋದಿ ವಿರುದ್ಧ ಕಳೆದ ವರ್ಷ ಮೇ ತಿಂಗಳಂದು ಇಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿತ್ತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا