Urdu   /   English   /   Nawayathi

ರಾಹುಲ್ ಸಮ್ಮುಖದಲ್ಲಿ ಹಾರ್ದಿಕ್ ಪಟೇಲ್ ಇಂದು ಕಾಂಗ್ರೆಸ್ ಗೆ

share with us

ಗಾಂಧಿನಗರ: 12 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಗುಜರಾತ್ ನ ಪಾಟೇದಾರ್ ಮೀಸಲು ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಮಂಗಳವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ. ಹಾರ್ದಿಕ್ ಪಟೇಲ್ ರವಿವಾರ ತಾನು ಕಾಂಗ್ರೆಸ್ ಸೇರ್ಪಡೆಯಾಗುವುದನ್ನು ಖಚಿತ ಪಡಿಸಿದ್ದರು. ಮುಂಬರುವ ಲೋಕಸಭೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ದೇಶದ ಸೇವೆ ಮಾಡುವ ಹಂಬಲದಿಂದ ನಾನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಗಾಂಧಿ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಸೇರ್ಪಡೆಯಾಗುತ್ತೇನೆ ಎಂದು ಹಾರ್ದಿಕ್ ಪಟೇಲ್ ರವಿವಾರ ಟ್ವೀಟ್ ಮಾಡಿದ್ದರು. ಯಾವುದೇ ಕಾನೂನಾತ್ಮಕ ತೊಂದರೆ ಆಗದಿದ್ದರೆ ಮತ್ತು ಪಕ್ಷ ಬಯಸಿದರೆ ನಾನು ಚುಣಾವಣೆಗೆ ಸ್ಪರ್ಧಿಸ ಬಯಸುತ್ತೇನೆ. ಭಾರತದ 125 ಕೋಟಿ ಭಾರತೀಯರ ಸೇವೆ ಮಾಡಲು ಬಯಸುತ್ತೇನೆ ಎಂದು ತನ್ನ ರಾಜಕೀಯ ಪ್ರವೇಶದ ಬಗ್ಗೆ ಹೇಳಿದ್ದರು. 2015ರಲ್ಲಿ ಗುಜರಾತ್ ನಲ್ಲಿ ನಡೆದ ಮೀಸಲಾತಿ ಹೋರಾಟದಲ್ಲಿ ಗಲಭೆ ನಡೆಸಿದ ಆರೋಪದಡಿ ಹಾರ್ದಿಕ್ ಪಟೇಲ್ ಗೆ ಸ್ಥಳೀಯ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ನೀಡಿತ್ತು. ಪಟೇಲ್ ಜೈಲು ಅವಧಿಯ ಬಗ್ಗೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದರೂ, ದೋಷಾರೋಪವನ್ನು ಅಮಾನತು ಗೊಳಿಸಿಲ್ಲ. ಇದರಿಂದಾಗಿ ಹಾರ್ದಿಕ್ ಪಟೇಲ್ ಚುಣಾವಣೆ ಸ್ಪರ್ಧೆಗೆ ತಡೆಯಾಗುವ ಸಾಧ್ಯತೆ ಇದೆ. 

Hardik Patel✔@HardikPatel_

To give shape to my intentions to serve society & country, I have decided to join Indian National Congress on 12th March in presence of Shri Rahul Gandhi & other senior leaders.

17.2K

6:46 PM - Mar 10, 2019

Twitter Ads info and privacy

7,476 people are talking about this

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا