Urdu   /   English   /   Nawayathi

ಇಥೋಪಿಯಾ ವಿಮಾನ ದುರಂತ: 2 ನಿಮಿಷ ತಡವಾಗಿದ್ದಕ್ಕೆ ಗ್ರೀಕ್ ವ್ಯಕ್ತಿಯ ಪ್ರಾಣ ಉಳಿಯಿತು!

share with us

ಅಥೆನ್ಸ್: 11 ಮಾರ್ಚ್ (ಫಿಕ್ರೋಖಬರ್ ಸುದ್ದಿ) ನಾನು ಎರಡು ನಿಮಿಷ ತಡವಾಗಿ ಆಗಮಿಸಿದ್ದಕ್ಕೆ ಫ್ಲೈಟ್ ಮಿಸ್ ಆಯ್ತು. ಆದರೆ ಪ್ರಾಣ ಉಳಿಯಿತು ಎಂದು 157 ಜನರನ್ನು ಬಲಿ ಪಡೆದ ಇಥಿಯೋಪಿಯಾ ಬೋಯಿಂಗ್ 737 ವಿಮಾದಲ್ಲಿ ಪ್ರಯಾಣಿಸಬೇಕಾಗಿದ್ದ ಗ್ರೀಕ್ ವ್ಯಕ್ತಿಯೊಬ್ಬರು ಹೇಳಿದ್ದಾರೆ. ನಿನ್ನೆ ಇಥಿಯೋಪಿಯಾ ರಾಜಧಾನಿ ಆಡಿಸ್ ಅಬಬಾ ಬಳಿ ಬೋಯಿಂಗ್ 737 ವಿಮಾನ ಪತನಗೊಂಡು 157 ಪ್ರಯಾಣಿಕರು ಸಜೀವ ದಹನವಾಗಿದ್ದರು. ಆಡಿಸ್ ಅಬಬಾದಿಂದ 62 ಕಿ.ಮೀ ದೂರದಲ್ಲಿರುವ ಬಿಷೋಫ್ಟು ಬಳಿ ವಿಮಾನ ಪತನಗೊಂಡಿತ್ತು. 8:38ಕ್ಕೆ ಟೇಕಾಫ್ ಆಗಿದ್ದ ವಿಮಾನ 8:44ಕ್ಕೆ ಸಂಪರ್ಕ ಕಳೆದುಕೊಂಡು ಅಪಘಾತಕ್ಕೀಡಾಗಿತ್ತು. ಒಟ್ಟು 33ದೇಶಗಳ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಭಾನುವಾರ ಪತನವಾದ ಇಥಿಯೋಪಿಯನ್ ಏರ್ಲೈನ್ಸ್'ನ ಬೋಯಿಂಗ್ ವಿಮಾನದ 150ನೇ ಪ್ರಯಾಣಿಕ ತಾವಾಗಿದ್ದು, ಅದರಲ್ಲಿ ಪ್ರಯಾಣಿಸಿದ್ದರೆ ಖಂಡಿತಾ ಪ್ರಾಣ ಹೋಗುತ್ತಿತ್ತು. ಆದರೆ, ಬೋರ್ಡಿಂಗ್ ಸಂದರ್ಭದಲ್ಲಿ 2 ನಿಮಿಷ ತಡವಾಗಿ ತೆರಳಿದ್ದರಿಂದ ಫ್ಲೈಟ್ ಮಿಸ್ ಆಯ್ತು. ಆದರೆ ಅದರಿಂದ ನನ್ನ ಜೀವ ಉಳೀತು ಎಂದು ಈ ಘಟನೆ ಬಳಿಕ ಗ್ರೀಕ್ ವ್ಯಕ್ತಿ ಅಂತೋಣಿ ಮವೆರೋಪೋಲೋಲಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا