Urdu   /   English   /   Nawayathi

ಸುಪಾರಿ ಹತ್ಯೆಗೆ ಸಂಚು: ಸ್ಪಷ್ಟನೆ ನೀಡಿದ ಯಶ್‌

share with us

ಬೆಂಗಳೂರು: 10 ಮಾರ್ಚ್ (ಫಿಕ್ರೋಖಬರ್ ಸುದ್ದಿ) ತಮ್ಮ ಹತ್ಯೆಗೆ ಸ್ಕೆಚ್‌ ರೂಪಿಸಲಾಗಿತ್ತು ಎನ್ನುವ ಊಹಾಪೋಹಕ್ಕೆ ನಟ ಯಶ್‌ ತೆರೆ ಎಳೆದಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಯಶ್‌, ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಯಶ್‌, "ಸುಪಾರಿ ಪ್ರಕರಣದಲ್ಲಿ ನನ್ನ ಹೆಸರೇ ಇಲ್ಲ, ನನಗೂ ಇದಕ್ಕೂ ಸಂಬಂಧವಿಲ್ಲ. ಈ ವಿಷಯದಲ್ಲಿ ಕೆಲವು ಮಾಧ್ಯಮಗಳಲ್ಲಿ ವಿನಾ ಕಾರಣ ನನ್ನ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಸುದ್ದಿ ನೋಡಿದ ಮೇಲೆ ಸ್ವತಃ ನಾನೇ ಗೃಹ ಸಚಿವರ ಬಳಿ ಹಾಗೂ ಪೊಲೀಸ್‌ ಅಧಿಕಾರಿಗಳ ಬಳಿ ಮಾತನಾಡಿದ್ದೇನೆ. ಎಫ್ಐಆರ್‌ ಅಥವಾ ಈ ಪ್ರಕರಣದಲ್ಲಿ ನನ್ನ ಹೆಸರಿಲ್ಲ ಎಂದು ಅವರೇ ಖಚಿತ ಪಡಿಸಿದ್ದಾರೆ' ಎಂದು ತಿಳಿಸಿದ್ದಾರೆ. "ಯಾರೋ ಬಂದು ಕೊಲೆ ಮಾಡೋದಕ್ಕೆ ನಾನೇನು ಕೋಳಿನಾ..ಕುರಿನಾ..? ನಾನೇನು, ನನ್ನ ಶಕ್ತಿಯೇನು ಅಂತ ನನಗೆ ಗೊತ್ತಿದೆ. ಬೇರೆಯವರಿಗೂ ಗೊತ್ತಾಗಲಿ ಅಂತಾನೇ ನಾನು ನಿಮ್ಮ ಮುಂದೆ ಬಂದಿದ್ದೀನಿ. ಆದ್ರೆ, ಆ ರೀತಿ ಯಾವುದೇ ಘಟನೆ ನಡೆದಿಲ್ಲ. ಇದೆಲ್ಲ ಎಲ್ಲಿಂದ ಆರಂಭವಾಗಿದೆ, ಹೇಗೆ ಹರಡುತ್ತಿದೆ ಎಂಬುದು ಗೊತ್ತಿಲ್ಲ. ದಯವಿಟ್ಟು ಯಾರೂ ಇಂತಹ ಸುದ್ದಿಗಳಿಗೆ ಕಿವಿಕೊಡಬೇಡಿ' ಎಂದು ಯಶ್‌ ಮನವಿ ಮಾಡಿದರು.

ನಮ್ಮ ಇಂಡಸ್ಟ್ರಿಯಲ್ಲಿ ಅಂಥವರಿಲ್ಲ: ಸಾಮಾಜಿಕ ಜಾಲತಾಣದಲ್ಲಿ ಇದು ಕೆಟ್ಟ ಪರಿಣಾಮ ಬೀರುತ್ತಿದೆ. ಇನ್ನೊಬ್ಬ ನಟ ಯಾರೋ ಸುಪಾರಿ ಕೊಟ್ಟಿರಬಹುದು ಎಂಬ ಮಾತುಗಳು  ಚರ್ಚೆಯಾಗ್ತಿದೆ. ಇದೆಲ್ಲ ನಮ್ಮ ಇಂಡಸ್ಟ್ರಿಯಲ್ಲಿ ಇಲ್ಲ. ನಮ್ಮಲ್ಲಿ ಯಾರೂ ಆ ರೀತಿ ಯೋಚನೆ ಕೂಡ ಮಾಡಲ್ಲ. ಆ ರೀತಿ ಇದ್ದರೇ ದಾಖಲೆ ಕೊಡಿ ಎಂದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا