Urdu   /   English   /   Nawayathi

ಗದಗ ಜಿಲ್ಲೆಯಲ್ಲಿ '10 ರೂಪಾಯಿ ಡಾಕ್ಟರ್' ಎಂದೇ ಫೇಮಸ್ಸಾಗಿರುವ ಮಾದರಿ ವೈದ್ಯ

share with us

ಗದಗ: 10 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಇವರು 10 ರೂಪಾಯಿ ಡಾಕ್ಟರ್ ಎಂದೇ ಗ್ರಾಮದಲ್ಲಿ ಜನಪ್ರಿಯ. ಅದಕ್ಕೆ ಕಾರಣ ಅವರ ನಿಸ್ವಾರ್ಥ ಸೇವೆ, ತಮ್ಮ ವೈದ್ಯಕೀಯ ಸೇವೆಗೆ ರೋಗಿಗಳಿಂದ ಪಡೆಯುವ ಶುಲ್ಕದ ಮೊತ್ತ. ವೈದ್ಯ ಡಾ. ಕಲ್ಲೇಶ್ ಮುರಾಶಿಲಿನ್ ಸಮಾಲೋಚನೆಗೆ ಬಂದ ವೈದ್ಯರ ಬಳಿಯಿಂದ ತೆಗೆದುಕೊಳ್ಳುವ ಮೊತ್ತ ಕೇವಲ 10 ರೂಪಾಯಿ, ಕೆಲವೊಮ್ಮೆ ಅಷ್ಟೂ ತೆಗೆದುಕೊಳ್ಳುವುದಿಲ್ಲ. ಗದಗ ಜಿಲ್ಲೆಯ ಮಲ್ಲಸಮುದ್ರ ಗ್ರಾಮದ ಕಲ್ಲೇಶ್ ಮುರಾಶಿಲಿನ್ ಕಳೆದ 22 ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿ ತೊಡಗಿದ್ದಾರೆ. ಅವರು ವೈದ್ಯಕೀಯ ವೃತ್ತಿ ಮಾಡುವುದು ಹಣ ಸಂಪಾದನೆಗೆ ಅಲ್ಲ, ಬದಲಿಗೆ ಬಡ ಜನರ ಸೇವೆಗೆ. ಆಯುರ್ವೇದ ವೈದ್ಯಕೀಯ ಪದವಿ ಪಡೆದ ಕಲ್ಲೇಶ್ ತಾವು ಓದುತ್ತಿರುವಾಗಲೇ ಬಡ ಜನತೆಯ ಸೇವೆ ಮಾಡುವ ಗುರಿ ಹೊಂದಿದ್ದರು. ಬಡ ಕುಟುಂಬದಲ್ಲಿ ಹುಟ್ಟಿ ಹಾಲು ಮಾರಾಟ ಮಾಡಿ ಅರೆಕಾಲಿಕ ಉದ್ಯೋಗ ಮಾಡಿ ಓದಿ ತೇರ್ಗಡೆ ಹೊಂದಿದ್ದರು. ನಾನು ಶಾಲಾ ಕಾಲೇಜು ದಿನಗಳಲ್ಲಿ ಕಷ್ಟದಲ್ಲಿಯೇ ಕಳೆದೆ. ನಮಗೊಂದು ಸಣ್ಣ ತೋಟವಿತ್ತು. ಹಸುಗಳನ್ನು ಸಾಕಿ ಹಾಲು ಮಾರಾಟ ಮಾಡಿ ವೈದ್ಯಕೀಯ ಪದವಿ  ವಿದ್ಯಾಭ್ಯಾಸ ಮುಗಿಸಿದೆ. ಆ ಸಂದರ್ಭದಲ್ಲಿ ಅನೇಕ ಮಂದಿ ಕಾಯಿಲೆಗಳಿಂದ ಹಣವಿಲ್ಲದೆ ಬಳಲುತ್ತಿದ್ದುದನ್ನು ನೋಡುತ್ತಿದ್ದೆ. ಆಗಲೇ ಬಡವರ ಆರೋಗ್ಯ ಸೇವೆ ಮಾಡಬೇಕೆಂದು ನಿರ್ಧಾರ ಮಾಡಿದ್ದೆ ಎನ್ನುತ್ತಾರೆ ಕಲ್ಲೇಶ್. ಡಾ.ಕಲ್ಲೇಶ್ ತಮ್ಮ ಮನೆಯಿಂದ ಕ್ಲಿನಿಕ್ ಗೆ ಪ್ರತಿದಿನ ಸೈಕಲ್ ನಲ್ಲಿ ಹೋಗುತ್ತಾರೆ. ಅಗತ್ಯವಿದ್ದರೆ ಮಾತ್ರ ಬೈಕ್ ಅಥವಾ ಕಾರು ಬಳಸುವುದು. ಆರೋಗ್ಯಕರ ಜೀವನಶೈಲಿಗೆ ಸೈಕಲ್ ಒಳ್ಳೆಯದು ಎನ್ನುವುದು ಅವರ ಅಭಿಪ್ರಾಯ. ಬೆಳಗ್ಗೆ 8.30ಕ್ಕೆ ಕ್ಲಿನಿಕ್ ತೆರೆಯುತ್ತಾರೆ. ಅದಾಗಲೇ ರೋಗಿಗಳು ಕ್ಲಿನಿಕ್ ನ ಹೊರಗೆ ಬಂದು ಸಾಲಿನಲ್ಲಿ ನಿಂತು ಕಾಯುತ್ತಿರುತ್ತಾರೆ. ಅಗತ್ಯಬಿದ್ದರೆ ಕಲ್ಲೇಶ್ ಅವರು ರೋಗಿಗಳ ಮನೆಗೆ ಹೋಗಿ ಚಿಕಿತ್ಸೆ ನೀಡುವುದೂ ಇದೆ. ವೃದ್ಧರ ಮತ್ತು ಅಶಕ್ತರ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಾರೆ. ಆದರೆ ಅವರಿಂದ ಶುಲ್ಕ ತೆಗೆದುಕೊಳ್ಳುವುದಿಲ್ಲ ಎಂದು ಗ್ರಾಮದ ನಿವಾಸಿಗಳು ಹೇಳುತ್ತಾರೆ. ಮಲ್ಲಸಮುದ್ರ ಗ್ರಾಮದ ನಿವಾಸಿಗಳಿಗೆ ಕಲ್ಲೇಶ್ ಡಾಕ್ಟರ್ ಉಚಿತವಾಗಿ ಮದ್ದನ್ನು ಪೂರೈಸುವುದು ಕೂಡ ಉಂಟು. ಅವರು ನಮಗೆ ಒಬ್ಬ ಮಾದರಿ ವ್ಯಕ್ತಿ. ರೋಗಿಗಳು ಹಣ ತೆಗೆದುಕೊಳ್ಳಿ ಎಂದು ಕೇಳಿಕೊಂಡರು ಸಹ ಕಲ್ಲೇಶ್ ಡಾಕ್ಟರ್ ಹಣ ಪಡೆಯುವುದಿಲ್ಲ ಎನ್ನುತ್ತಾರೆ ಸ್ಥಳೀಯರು. ಕಲ್ಲೇಶ್ ಡಾಕ್ಟರ ನಿಸ್ವಾರ್ಥ ಸೇವೆ ಕಂಡು ನೆರೆ ಹೊರೆಯ ಗ್ರಾಮಗಳ ಜನರು ಕೂಡ ಅವರ ಬಳಿ ಬರುತ್ತಾರಂತೆ. ಅವರು ನೀಡುವ ಔಷಧ ರೋಗಿಗಳನ್ನು ಬೇಗ ಗುಣಮುಖ ಮಾಡುತ್ತದೆ ಎನ್ನುವ ನಂಬಿಕೆಯಿದೆ.


ಡಾ|| ಕಲ್ಲೇಶ್ ಅವರ ಈ ಸಮಾಜ ಸೇವೆಗೆ ಅವರ ಕುಟುಂಬದವರ ಬೆಂಬಲವಿದೆ. ಅವರ ಪತ್ನಿ ಕೂಡ ವೈದ್ಯೆ, ಡಾ|| ದೀಪ ಗದಗ ಪಟ್ಟಣದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಕಲ್ಲೇಶ್ ಅವರು ಮದುವೆಗೆ ಮುಂಚೆ ರೋಗಿಗಳಿಂದ 5ರೂಪಾಯಿ ತೆಗೆದುಕೊಳ್ಳುತ್ತಿದ್ದರು, ಮದುವೆಯಾದ ನಂತರ 10 ರೂಪಾಯಿಗೆ ಶುಲ್ಕ ಹೆಚ್ಚಿಸಿದ್ದಾರೆ.
ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا