Urdu   /   English   /   Nawayathi

ಏರ್​ಸ್ಟ್ರೈಕ್​ ಬಗ್ಗೆ ಪ್ರಶ್ನಿಸುವವರು ದೇಶದ್ರೋಹಿಗಳೇ? ಕೇಂದ್ರವನ್ನು ಕುಟುಕಿದ ಫಾರುಕ್ ಅಬ್ದುಲ್ಲಾ

share with us

ಶ್ರಿನಗರ: 06 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಏರ್​ಸ್ಟ್ರೈಕ್​ ಕುರಿತಾಗಿ ಸ್ಪಷ್ಟ ಮಾಹಿತಿ ಬಿಡುಗಡೆ ಮಾಡುವಂತೆ ಪ್ರತಿಪಕ್ಷಗಳು ಒತ್ತಡ ಹೇರುತ್ತಿರುವವರ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ದಾಳಿ ಬಗ್ಗೆ ಸಾಕ್ಷಿ ಕೇಳುವವರು ಹೇಗೆ ದೇಶದ್ರೋಹಿಗಳಾಗುತ್ತಾರೆ ಎಂದು ಜಮ್ಮ ಮತ್ತು ಕಾಶ್ಮೀತದ ಮಾಜಿ ಸಿಎಂ ಫರೂಕ್​ ಅಬ್ದುಲ್ಲಾ ಕೇಂದ್ರವನ್ನು ಪ್ರಶ್ನಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್​ನ ಮುಖಂಡರೂ ಆಗಿರುವ ಅವರು, ನಾವು ಅವರ  (ಪಾಕ್​) ಒಂದು ವಿಮಾನವನ್ನು ಹೊಡೆದುರುಳಿಸಿದ್ದೇವೆ. ಆದರೆ ಅಮಿತ್​ ಶಾ ಹೇಳುವಂತೆ, 300 ಉಗ್ರರು ಬಲಿಯಾಗಿರುವ ಬಗ್ಗೆ ಸಾಕ್ಷಿ ಎಲ್ಲಿದೆ? ಎಂದು  ಕುಟುಕಿದ್ದಾರೆ. ಒಂದು ವೇಳೆ ನೀವು ಈ ಪ್ರಶ್ನೆ  ಕೇಳಿದರೆ ದೇಶ ವಿರೋಧಿಗಳಾಗಿಬಿಡುತ್ತೀರಿ. ನೀವು ಪ್ರಶ್ನಿಸುವ ಸಮಯ ಇದೀಗ ಬಂದಿದೆ ಎಂದಿದ್ದಾರೆ. ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ  ಭಾರತ ನಡೆಸಿದ ಏರ್​ಸ್ಟ್ರೈಕ್​ ಬಗ್ಗೆ ಈ ಮೊದಲು ಸಹಮತ ವ್ಯಕ್ತಪಡಿಸಿದ್ದ ಪ್ರತಿಪಕ್ಷಗಳು, ಇದೀಗ ಅಪಸ್ವರ ಎತ್ತುತ್ತಿವೆ. ಘಟನೆ ಸಂಬಂಧ ಅಗತ್ಯ ಸಾಕ್ಷಿ ಬಿಡುಗಡೆ ಮಾಡಲೇಬೆಂದು  ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.  

View image on Twitter

ANI✔@ANI

Farooq Abdullah, National Conference, on in Balakot: We have shot one of their planes? Where is the proof of what Amit Shah says, ‘300 people died’? If you ask, you are against the country. Time has come that you should ask questions.

298

3:30 PM - Mar 6, 2019

232 people are talking about this

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا