Urdu   /   English   /   Nawayathi

ಕರ್ನಾಟಕ ಬ್ಯಾಂಕ್​ಗೆ 4 ಕೋಟಿ ದಂಡ... ತಪ್ಪಿತು ಮತ್ತೊಂದು ಆರ್ಥಿಕ ವಂಚನೆ..!

share with us

ಮುಂಬೈ: 05 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಕೇಂದ್ರೀಯಾ ಬ್ಯಾಂಕಿನ ಸ್ವಿಫ್ಟ್​ ಸೂಚನೆಗಳನ್ನು ಪಾಲಿಸದ ಕರ್ನಾಟಕ ಬ್ಯಾಂಕ್​ಗೆ ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ 4 ಕೋಟಿಯಷ್ಟು ದಂಡ ವಿಧಿಸಿದೆ. ಸ್ವಿಫ್ಟ್​ ಸಂಬಂಧಿತ ಕಾರ್ಯಾಚರಣೆ ನಿಯಂತ್ರಣಗಳನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಬ್ಯಾಂಕ್​ ವಿಳಂಬ ಮಾಡಿರುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 4 ಕೋಟಿ ದಂಡ ವಿಧಿಸಿದೆ ಎಂದು ಬ್ಯಾಂಕ್ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಹೇಳಿದೆ. ಸ್ವಿಫ್ಟ್ ಸಂಬಂಧಿತ 4ಕಾರ್ಯಚರಣೆಯ ನಿಯಂತ್ರಣಗಳನ್ನು ಜಾರಿಗೊಳಿಸಲು ವಿಳಂಬ ಕರ್ನಾಟಕ ಬ್ಯಾಂಕ್​ ವಿಳಂಬ ಮಾಡಿದ್ದು, 1945ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಸೆಕ್ಷನ್ 46 ಹಾಗೂ 47 ಎ ಅಡಿ 40 ದಶಲಕ್ಷ ರೂ. ದಂಡ ವಿಧಿಸಿರುವುದಾಗಿ ಆರ್​ಬಿಐ ತಿಳಿಸಿದೆ. ಸ್ವಿಫ್ಟ್​ ಎಂಬುದು ಸಂದೇಶ ಕಾರ್ಯಜಾಲವಾಗಿದ್ದು, ಪರಿಣಾಮಕಾರಿ ಸಂಕೇತ ವ್ಯವಸ್ಥೆಯ ಮೂಲಕ ಹಣಕಾಸು ಸಂಸ್ಥೆಗಳ ಗ್ರಾಹಕರ ಮಾಹಿತಿ ಹಾಗೂ ಸೂಚನೆ ನೀಡಲು ಬಳಸುವ ವ್ಯವಸ್ಥೆ ಆಗಿದೆ. ಈ ಹಿಂದೆ ಪಂಜಾಬ್ ನ್ಯಾಷಿನಲ್ ಬ್ಯಾಂಕ್ ಸ್ವಿಫ್ಟ್​ ಸೂಚನೆಯನ್ನು ತಪ್ಪಾಗಿ ಬಳಸಿಕೊಂಡು 14 ಸಾವಿರ ಕೋಟಿಯಷ್ಟು ವಂಚನೆ ಒಳಗಾಗಿತ್ತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا