Urdu   /   English   /   Nawayathi

400 ಡಿಟೋನೇಟರ್’ಗಳು ಸೇರಿ 22 ಕೆಜಿ ಸ್ಫೋಟಕ ವಶ..!

share with us

ಮುಂಬೈ: 05 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಮುಂಬೈ ಪೊಲೀಸರು ವಿಹಾರದ ಮಾಂಡವಿ ತಾಲೂಕಿನ ಸಲ್ವಾನ್ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿ 400 ಡಿಟೋನೇಟರ್‍ಗಳು ಮತ್ತು ಜಿಲೆಟಿನ್ ಕಡ್ಡಿಗಳು ಸೇರಿದಂತೆ 22 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 2ಅಂತಸ್ತಿನ ಕಟ್ಟಡದ ಮಾಲೀಕರಾದ ದಂಪತಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.ಖಚಿತ ಮಾಹಿತಿ ಮೇರೆಗೆ ಕಟ್ಟಡದ ಮೇಲೆ ದಾಳಿ ನಡೆಸಿರುವ ಪೊಲೀಸರು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಯಾವ ಉದ್ದೇಶಕ್ಕಾಗಿ ಇವುಗಳನ್ನು ಈ ಕಟ್ಟಡದಲ್ಲಿ ದಾಸ್ತಾನು ಮಾಡಲಾಗಿತ್ತು ಎಂಬ ಬಗ್ಗೆ ಬಂಧಿತರಿಂದ ಹೆಚ್ಚಿನ ವಿವರ ಪಡೆಯಲಾಗುತ್ತಿದೆ. ಮುಂಬೈನ ಹಲವೆಡೆ ಇತ್ತೀಚೆಗೆ ಪೊಲೀಸರು ಸ್ಫೋಟಕಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳುತ್ತಿರುವ ಬೆನ್ನಲ್ಲೇ ಮತ್ತೊಂದು ಸಂಗತಿ ಬೆಳಕಿಗೆ ಬಂದಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا