Urdu   /   English   /   Nawayathi

ಸ್ನೇಹಿತನ ಫೇಸ್​ಬುಕ್​ ಅಕೌಂಟ್​ ಹ್ಯಾಕ್​ ಮಾಡಿ ಪಾಕಿಸ್ತಾನ ಪರ ಪೋಸ್ಟ್​​!

share with us

ಬೆಳಗಾವಿ: 04 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಆರ್ಥಿಕ ನೆರವು ನೀಡಿಲ್ಲ ಎಂಬ ಒಂದೇ ಕಾರಣಕ್ಕೆ ಆತ್ಮೀಯ ಸ್ನೇಹಿತನ ಫೇಸ್​ಬುಕ್ ಅಕೌಂಟ್ ಹ್ಯಾಕ್ ಮಾಡಿ ದೇಶದ್ರೋಹಿ ಪೋಸ್ಟ್ ಮಾಡಿದ್ದ ವ್ಯಕ್ತಿಯೋರ್ವ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.  ರಾಮದುರ್ಗ ತಾಲೂಕಿನ ಕಂಕನವಾಡಿ ಗ್ರಾಮದ ನಿವಾಸಿ ಹಾಗೂ ಶಫಿ ಬೆಣ್ಣಿ ಅವರ ಆತ್ಮೀಯ ಸ್ನೇಹಿತ ನಾಗರಾಜ ಮಾಳಿ ಬಂಧಿತ ಆರೋಪಿ. ಮಾಜಿ ಶಾಸಕ ಅಶೋಕ ಪಟ್ಟಣ ಆಪ್ತ ಶಫಿ ಬೆಣ್ಣಿ ಅವರ ಫೇಸ್​ಬುಕ್ ಅಕೌಂಟ್​ನಿಂದ ದೇಶದ್ರೋಹಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ರಾಮದುರ್ಗ ಪಟ್ಟಣದಲ್ಲಿ ರಾಜಕೀಯ ತಿರುವು ಪಡೆದಿದ್ದ ಈ ಪ್ರಕರಣಕ್ಕೆ ಬೆಳಗಾವಿ ಎಸ್‍ಪಿ ಸುಧೀರಕುಮಾರ ರೆಡ್ಡಿ ಮಂಗಳ ಹಾಡಿದ್ದಾರೆ.  ಮೂರು ದಿನಗಳ ಹಿಂದೆ ನನ್ನ ಫೇಸ್​ಬುಕ್ ಹ್ಯಾಕ್ ಆಗಿದೆ ಎಂದು ಶಫಿ ಬೆಣ್ಣಿ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸೈಬರ್ ಎಕ್ಸ್​ಪರ್ಟ್ ಮೊರೆ ಹೋಗಿ, ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ಎಳೆದಿದ್ದಾರೆ. ಈ ಹಿಂದೆ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದ ನಾಗರಾಜ ಮಾಳಿಗೆ ಎರಡು ಸಲ ಶಫಿ ಆರ್ಥಿಕ ಸಹಾಯ ಮಾಡಿದ್ದರು. ಮತ್ತೆ ಹಣ ನೀಡುವಂತೆ ನಾಗರಾಜ ಕೇಳಿದಾಗ ಶಫಿ ಹಣ ನೀಡಲು ನಿರಾಕರಿಸಿದ್ದರು. ಈ ಸೇಡಿಗಾಗಿಯೇ ನಾಗರಾಜ ಎಂಬಾತ ಶಫಿ ಫೇಸ್​ಬುಕ್ ಅಕೌಂಟ್ ಹ್ಯಾಕ್ ಮಾಡಿದ್ದಾನೆ. ಬಳಿಕ ಪಾಕಿಸ್ತಾನ ಪರ ಪೋಸ್ಟ್ ಹಾಕಿದ್ದ ಎನ್ನಲಾಗಿದೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا