Urdu   /   English   /   Nawayathi

ಡ್ರಗ್ಸ್ ದಂಧೆ; ನೈಜೀರಿಯಾ ಪ್ರಜೆ ಸೆರೆ

share with us

ಬೆಂಗಳೂರು: 03 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಸಾಫ್ಟ್‌ವೇರ್ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಕೊಕೇನ್, ಎಂಡಿಎಂಎ, ಎಕ್ಸ್‌ಟಸಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾದ ಜೋಸೆಫ್ ಬೆಂಜಮಿನ್ (29) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿ ವೀಸಾದಡಿ 2012ರಲ್ಲಿ ನಗರಕ್ಕೆ ಬಂದಿದ್ದ ಬೆಂಜಮಿನ್, ಕೆ.ಆರ್.ಪುರದ ಕಾವೇರಿ ಲೇಔಟ್‌ನಲ್ಲಿ ನೆಲೆಸಿದ್ದ. ಶಿಕ್ಷಣ ಮುಗಿದರೂ ದೇಶಕ್ಕೆ ಮರಳದೆ, ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.‌ ಸ್ನೇಹಿತರ ಮೂಲಕ ನೈಜೀರಿಯಾದಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಆರೋಪಿ, ಅವುಗಳನ್ನು ಪರಿಚಿತ ಯುವಕ–ಯುವತಿಯರಿಗೆ ಹೆಚ್ಚಿನ ಬೆಲೆಗೆ ಮಾರುತ್ತಿದ್ದ. ವ್ಯಸನಿಗಳ ಜತೆ ವಾಟ್ಸ್‌ಆ್ಯಪ್‌ ಗ್ರೂಪ್ ಮಾಡಿಕೊಂಡಿದ್ದ ಆತ, ಹೊಸ ಮಾಲು ಬರುತ್ತಿದ್ದಂತೆಯೇ ಅದರಲ್ಲಿ ವಿಷಯತಿಳಿಸುತ್ತಿದ್ದ. ಅಲ್ಲದೇ, ವ್ಯಸನಿಗಳು ಇರುವ ಸ್ಥಳಕ್ಕೇ ಹೋಗಿ ಡ್ರಗ್ಸ್‌ ಕೊಟ್ಟು ಹಣ ಪಡೆದುಕೊಳ್ಳುತ್ತಿದ್ದ. ‘ದಂಧೆಯ ಬಗ್ಗೆ ವಿದ್ಯಾರ್ಥಿಯೊಬ್ಬ ಮಾಹಿತಿ ಕೊಟ್ಟ. ಆ ಸುಳಿವು ಆಧರಿಸಿ ಎಸಿಪಿ ಮೋಹನ್‌ ಕುಮಾರ್ ನೇತೃತ್ವದ ತಂಡ ಶುಕ್ರವಾರ ಬೆಂಜಮಿನ್ ಮನೆ ಮೇಲೆ ದಾಳಿ ನಡೆಸಿತು. 20 ಗ್ರಾಂ ಕೊಕೇನ್, 9 ಗ್ರಾಂನ ಎಂಡಿಎಂಎ, 36 ಎಕ್ಸ್‌ಟಸಿ ಮಾತ್ರೆಗಳು, ಸ್ಕೂಟರ್ ಸೇರಿದಂತೆ ₹ 3 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಯಿತು. ನ್ಯಾಯಾಲಯದ ಆದೇಶದಂತೆ ಬೆಂಜಮಿನ್‌ನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا