Urdu   /   English   /   Nawayathi

ಪಾಕಿಸ್ತಾನಕ್ಕೆ ಆಹಾರವಾಯ್ತು ಯಡಿಯೂರಪ್ಪ ಹೇಳಿಕೆ!

share with us

ನವದೆಹಲಿ: 28 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಪಾಕ್ ಉಗ್ರರ ಮೇಲೆ ಭಾರತೀಯ ವಾಯುಪಡೆ ಕಾರ್ಯಾಚರಣೆಯನ್ನು ರಾಜಕೀಯಕ್ಕೆ ಬಳಸಿಕೊಂಡ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ದೇಶಾದ್ಯಂತ ಸುದ್ದಿಮಾಡಿರುವುದಷ್ಟೇ ಅಲ್ಲದೇ ಪಾಕಿಸ್ತಾನಕ್ಕೂ ಆಹಾರವಾಗಿ ಪರಿಣಮಿಸಿದೆ. ಸೇನಾ ಕಾರ್ಯಾಚರಣೆಯನ್ನು ರಾಜಕಾರಣಗೊಳಿಸಬೇಡಿ ಎಂದು ವಿಪಕ್ಷಗಳು ಪದೇ ಪದೇ  ಮನವಿ ಮಾಡಿದ್ದರೂ ಸಹ ಮಾಜಿ ಸಿಎಂ ಯಡಿಯೂರಪ್ಪ ವೈಮಾನಿಕ ಕಾರ್ಯಾಚರಣೆಯನ್ನು ಲೋಕಸಭಾ ಚುನಾವಣೆಗೆ ತಳುಕು ಹಾಕಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸಿ ಪತ್ರಕರ್ತೆ ಬರ್ಖಾ ದತ್ ಟ್ವೀಟ್ ಮಾಡಿದ್ದರು. 

ಬರ್ಖಾ ದತ್ ಟ್ವೀಟ್ ನ್ನು ಉಲ್ಲೇಖಿಸಿರುವ ಪಾಕಿಸ್ತಾನದ ಆಡಳಿತಾರೂಢ ಪಿಟಿಐ ಪಕ್ಷ ಭಾರತದ ರಾಜಕಾರಣದ ಬಗ್ಗೆ ಟ್ವೀಟ್ ಮಾಡಿದ್ದು, ಸೇನಾ ಕಾರ್ಯಾಚರಣೆಯನ್ನು ರಾಜಕಾರಣಕ್ಕೆ ಬಳಸಿಕೊಂಡು ಲೋಕಸಭಾ ಚುನಾವಣೆ ಗೆಲ್ಲಲು ಮೋದಿ ಸರ್ಕಾರ ಯತ್ನಿಸುತ್ತಿದೆ  ಎಂದು ಟ್ವೀಟ್ ನಲ್ಲಿ ಆರೋಪಿಸಿದೆ. ಚುನಾವಣೆ ಗೆಲ್ಲುವುದಕ್ಕೆ ಏನು ಬೇಕಾದರೂ ಮಾಡುವ ಜನರನ್ನು ದೂರವಿಡಿ, ಯುದ್ಧ ಎಂಬುದು ಯಾವುದೇ ರಾಷ್ಟ್ರದ, ಯೋಧರ, ನಾಗರಿಕರ ಹಿತಾಸಕ್ತಿಯಾಗಿರುವುದಿಲ್ಲ. ಯಾವುದೇ ವ್ಯಕ್ತಿಗೆ ಸೇನಾ ಕಾರ್ಯಾಚರಣೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಬಿಡಬೇಡಿ ಎಂದು ಪಾಕಿಸ್ತಾನ ಹೇಳಿದೆ. ಯಡಿಯೂರಪ್ಪ ಹೇಳಿಕೆಯನ್ನು ನಮ್ಮ ಮೇಲೆಯೇ ದಾಳಿ ನಡೆಸಲು ಯತ್ನಿಸುತ್ತಿರುವ ಪಾಕಿಸ್ತಾನವೂ ಭಾರತಕ್ಕೆ ಬುದ್ಧಿ ಹೇಳುವುದಕ್ಕೆ ಬಳಸಿಕೊಂಡಿದೆ. ಮಾಜಿ ಮುಖ್ಯಮಂತ್ರಿಗಳು ಈ ರೀತಿಯ ಹೇಳಿಕೆ ನೀಡಿದ್ದಕ್ಕೆ ರಾಜಕೀಯ ನಾಯಕರು, ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا