Urdu   /   English   /   Nawayathi

ಶವದ ಮುಂದೆಯೇ ನಡೀತಾ ಪೊಲೀಸ್​-ಆಸ್ಪತ್ರೆ ಸಿಬ್ಬಂದಿಯ ಭ್ರಷ್ಟಾಚಾರ? ಕ್ಯಾಮರಾದಲ್ಲಿ ಸೆರೆ ಆಗಿದ್ದೇನು!?

share with us

ದಾವಣಗೆರೆ: 27 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ವೈದ್ಯೋ ನಾರಾಯಣೋ ಹರಿ ಎಂಬ ಕಾಲ ಈಗ ಬದಲಾಗಿದ್ದು, ಆಸ್ಪತ್ರೆಗಳೆಂದರೆ ಜೀವ ಹಿಂಡುವ ಕಾರ್ಖಾನೆಗಳು ಎಂಬಂತಾಗಿದೆ. ಅಷ್ಟೇ ಅಲ್ಲದೆ ಪೊಲೀಸರೂ ಸಹ ಹಣದ ಆಮಿಷ ತೋರಿಸಿ ಕೇಸ್​ ಮುಚ್ಚಿ ಹಾಕುವಂತಹ ಕಾರ್ಯ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದಕ್ಕೆ ಉತ್ತಮ ನಿದರ್ಶನ ಎಂಬಂತೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ನಿವಾಸಿ ಗಜೇಂದ್ರ ಎಂಬಾತ ಇತ್ತೀಚೆಗೆ ಸಾವನ್ನಪ್ಪಿದ್ದಾನೆ. ಈತನ ಶವವನ್ನು ಇಟ್ಟುಕೊಂಡು ಪೊಲೀಸ್​ ಸಿಬ್ಬಂದಿ ಹಾಗೂ ಆಸ್ಪತ್ರೆ ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. 

ಏನಿದು ಘಟನೆ: ಸವದತ್ತಿಯ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಗಜೇಂದ್ರ,  2018ರ ಫೆಬ್ರವರಿ 17ರಂದು ತಮ್ಮನ ಮಗಳ ಮದುವೆ ಇದೆ ಎಂದು ಹೇಳಿ ಹೊಸಪೇಟೆಗೆ ತೆರಳಿದ್ದ. ಆದರೆ ಆತ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಗಜೇಂದ್ರನ ತಮ್ಮನಾದ ಗಣೇಶ ಸವದತ್ತಿಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಫೆಬ್ರವರಿ 27ರ ಸಂಜೆ ಹರಿಹರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕರೆ ಮಾಡಿ ಗಜೇಂದ್ರ ಅವರು ಹರಿಹರದ ಕಾಳಿದಾಸ ನಗರದಲ್ಲಿ ನಡೆಯುತ್ತಿದ್ದ ಯುಜಿಡಿ ಕಾಮಗಾರಿ ವೇಳೆ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹರಿಹರಕ್ಕೆ ಬಂದ ಗಜೇಂದ್ರ ಸಂಬಂಧಿಕರು ಹಲವು ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ದೂರು ನೀಡುತ್ತಾರೆ. ಆದರೆ ಪೊಲೀಸ್ ಸ್ಟೇಷನ್​ನಲ್ಲಿ ಸಂಬಂಧಿಕರಿಗೆ ಹಣದ ಆಸೆ ತೋರಿಸಿ, ಯುಜಿಡಿ ಕಾಂಟ್ರ್ಯಾಕ್ಟರ್ ಇನ್ಸೂರೆನ್ಸ್ ಮಾಡಿಸಿದ್ದು, ನಾಲ್ಕು ಲಕ್ಷ ಹಣ ನೀಡುತ್ತಾರೆ ಎಂದು ತಿಳಿಸಿದ್ದಾರೆ. ಆದರೆ ಗಜೇಂದ್ರ ಕೆಲಸ ಮಾಡುತ್ತಿದ್ದದ್ದು ಹೊಟೇಲ್​ನಲ್ಲಿ. ಹರಿಹರಕ್ಕೆ ಬಂದು ಅದ್ಯಾವಾಗ ಕೆಲಸಕ್ಕೆ ಸೇರಿಕೊಂಡಿದ್ದಾನೆ ಎಂಬುದು ಯಾರಿಗೂ ತಿಳಿದಿಲ್ಲ. ಪೊಲೀಸರು ಹೇಳುವ ಪ್ರಕಾರ ಆತ ಒಂದೆರಡು ದಿನದ ಹಿಂದೆ ಅಷ್ಟೆ ಇಲ್ಲಿ ಕೆಲಸಕ್ಕೆ ಸೇರಿದ್ದನಂತೆ. ಈ ಎರಡು ದಿನದಲ್ಲಿ ಇನ್ಸೂರೆನ್ಸ್ ಮಾಡಿಕೊಡಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸಂಬಂಧಿಕರದ್ದಾಗಿದೆ. ಇನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಗಜೇಂದ್ರನ ಶವದ ಮರಣೋತ್ತರ ಪರೀಕ್ಷೆ ನಡೆಸಲು ಬಂದಾಗ, ಅಲ್ಲಿ ಶವಾಗಾರದ ಸಿಬ್ಬಂದಿಯಿಂದ ಹಿಡಿದು ವೈದ್ಯರವರೆಗೂ ಎಲ್ಲರೂ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಈ ಎಲ್ಲಾ ದೃಶ್ಯಗಳು ಮೊಬೈಲ್​ನಲ್ಲಿ ಸೆರೆಯಾಗಿವೆ. ಶವದ ಸಿಬ್ಬಂದಿಗೆ 1200 ರೂ., ಶವವನ್ನು ತೊಳೆಯುವವನಿಗೆ 200 ರೂ. ಮತ್ತು ವರದಿ ಕೊಡೋ ವೈದ್ಯನಿಗೆ 500 ರೂ. ಲಂಚ ನೀಡಲಾಗಿದೆ. ಈ ಲಂಚವನ್ನು ಕೊಡುವಂತೆ ಮೃತ ಗಜೇಂದ್ರನ ತಮ್ಮನಿಗೆ ಮಾರ್ಗದರ್ಶನ ಮಾಡಿರೋದು ಹರಿಹರ ಪೊಲೀಸ್ ಠಾಣೆಯ ಪಿಸಿ ಎಂದು ಆರೋಪಿಸಲಾಗಿದೆ. ಇಷ್ಟೆಲ್ಲಾ ಆದರೂ ಗಜೇಂದ್ರನ ಸಾವಿಗೆ ಕಾರಣವೇನು, ಆತನ ಸಾವು ಸಹಜವೋ ಅಸಹಜವೋ ಎಂಬ ಬಗ್ಗೆ ಯಾರೂ ಸರಿಯಾದ ಮಾಹಿತಿ ಕೊಟ್ಟಿಲ್ಲ ಎಂಬುವುದು ಸಂಬಂಧಿಕರ ದೂರಾಗಿದೆ.

ಬಿ-ರಿಪೋರ್ಟ್ ಹಾಕಿ ಕೈ ತೊಳೆದುಕೊಂಡರಾ ಪೊಲೀಸರು?

ಈ ಪ್ರಕರಣದ ತನಿಖೆ ನಡೆಸಿದ ಎಸ್​ಐ ಬಿ-ರಿಪೋರ್ಟ್ ಹಾಕಿ ಕೈ ತೊಳೆದುಕೊಂಡಿದ್ದಾರೆ. ಪ್ರಕರಣದಲ್ಲಿ ಗುತ್ತಿಗೆದಾರನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಎಸ್​ಐ ಗುತ್ತಿಗೆದಾರನೊಂದಿಗೆ ಶಾಮೀಲಾಗಿ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿದ್ದಾರೆ ಅನ್ನೋದು ಮೃತನ ಸಂಬಂಧಿಕರ ಆರೋಪವಾಗಿದೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا