Urdu   /   English   /   Nawayathi

ನಾಪತ್ತೆಯಾದ ಮಿಗ್ ಪೈಲಟ್ ಬಗ್ಗೆ ಮಾಹಿತಿ ನೀಡಿ: ಪಾಕಿಸ್ತಾನಕ್ಕೆ ಭಾರತದಿಂದ ಸಮನ್ಸ್

share with us

ನವದೆಹಲಿ: 27 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಕ್ಕೆ ಸೇರಿದ್ದ ಎಫ್ -16 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆ ಹೊಡೆದುರುಳಿದ ಬಳಿಕ ಭಾರತ ಹಾಗೂ ಪಾಕಿಸ್ತಾನಗಳು ತಮ್ಮ ತಮ್ಮ ರಾಯಭಾರಿಗಳಿಗೆ ಕದನ ವಿರಾಮ ಉಲ್ಲಂಘನೆ ಕುರಿತು ವಿವರಿಸಿದೆ. ಪಾಕಿಸ್ತಾನದಲ್ಲಿನ ಭಾರತ ಹೈಕಮಿಷನರ್  ಗೌರವ್ ಅಹ್ಲುವಾಲಿಯಾ ಅವರಿಗೆ ಸಮನ್ಸ್ ನೀಡಿದ್ದು ಭಾರತದ ಕದನ ವಿರಾಮ ಉಲ್ಲಂಘನೆ ಕುರಿತು ಆರೋಪಿಸಿದೆ. ದಕ್ಷಿಣ ಏಷ್ಯಾ ಮತ್ತು ಸಾರ್ಕ್ ಡೈರಕ್ಟರ್ ಜನರಲ್ ಆಗಿರುವ  ಡಾ.ಮೊಹಮ್ಮದ್ ಫೈಸಲ್ ಭಾರತೀಯ ರಾಜತಾಂತ್ರಿಕರಿಗೆ ಸಮನ್ಸ್ ನೀಡಿ "2003ರ ಕದನ ವಿರಾಮ ನಿಯಮವನ್ನು ಗೌರವಿಸಿ, ಭಾರತದ ಪಡೆಗಳು ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ. ನೀಡಿದ ಹೇಳಿಕೆ ತಿಳಿಸಿದೆ. ಪಾಕಿಸ್ತಾನದ ಡೆಪ್ಯುಟಿ ಹೈ ಕಮಿಷನರ್ ಸೈಯದ್ ಹೈದರ್ ಷಾ ಅವರಿಗೆ ಭಾರತ ವಿದೇಶಾಂಗ ಸಚಿವಾಲಯವು ಸಮನ್ಸ್ ನೀಡಿದ್ದು ಪಾಕಿಸ್ತಾನವು ನಾಪತ್ತೆಯಾಗಿರುವ ಪೈಲಟ್ ಕುರಿತು ಮಾಹಿತಿ ನೀಡಬೇಕೆಂದು ಕೇಳಿದೆ.  ಅಲ್ಲದೆ ಪುಲ್ವಾಮಾ ದಾಳಿ ಕುರಿತು ಪಾಕ್ ನಿಲುವನ್ನು ಸ್ಪಷ್ಟಪಡಿಸಬೇಕು ಎಂದೂ ಕೇಳಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا