Urdu   /   English   /   Nawayathi

ಕಾಶ್ಮೀರದಲ್ಲಿ ವಾಯುಪಡೆ ಹೆಲಿಕಾಪ್ಟರ್ ಪತನ, ಐವರು ಸಾವು

share with us

ಶ್ರೀನಗರ: 27 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ವೊಂದು ಬುಧವಾರ ಪತನಗೊಂಡಿದ್ದು, ಐವರು ಮೃತಪಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ವಾಯುಪಡೆಯ ಎಂಐ- 17 ಹೆಲಿಕಾಪ್ಟರ್ ಇಂದು ಬದ್ಗಾಮ್ ನಿಂದ 10 ಕಿ.ಮೀ. ದೂರದಲ್ಲಿರುವ ಗರೆಂಡ್ ಕಲಾನ್ ಗ್ರಾಮದ ಬಳಿ ಬಯಲು ಪ್ರದೇಶದಲ್ಲಿ ಪತನವಾಗಿದ್ದು, ವಾಯುಪಡೆಯ ನಾಲ್ವರು ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಈ ಅವಘಡದಲ್ಲಿ ಓರ್ವ ನಾಗರಿಕ ಸಹ ಮೃತಪಟ್ಟಿದ್ದು, ಆತನನ್ನು ಸ್ಥಳೀಯ ನಿವಾಸಿ ಕಿಫಾಯತ್ ಹುಸ್ಸೇನ್ ಎಂದು ಗುರುತಿಸಲಾಗಿದೆ. ಹೆಲಿಕಾಪ್ಟರ್ ಪತನಕ್ಕೆ ತಾಂತ್ರಿಕ ವೈಫಲ್ಯ ಕಾರಣ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا