Urdu   /   English   /   Nawayathi

ರಾಬರ್ಟ್​ ವಾದ್ರಾ ರಾಜಕೀಯಕ್ಕೆ ಬರ್ತಾರಾ..? ಈ ಬಗ್ಗೆ ಅವರು ಹೇಳೋದೇನು?

share with us

ನವದೆಹಲಿ: 25 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಇಡಿ ವಿಚಾರಣೆ ಎದುರಿಸುತ್ತಿರುವ ಸೋನಿಯಾ ಗಾಂಧಿ ಅಳಿಯ ರಾಬರ್ಟ್​ ವಾದ್ರಾ, ರಾಜಕೀಯಕ್ಕೆ ಬರುವ ಸಂಬಂಧ ಕೆಲಸ ಆರಂಭಿಸಿದ್ದೇನೆ. ಅದಕ್ಕಿನ್ನು ಅರ್ಜೆಂಟ್​ ಏನೂ ಇಲ್ಲ ಎನ್ನುವ ಮೂಲಕ ರಾಜಕೀಯಕ್ಕೆ ಬರುವ ಸುಳಿವು ನೀಡಿದರು. ರಾಜಕೀಯ ಪ್ರವೇಶ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲು ನನ್ನ ವಿರುದ್ಧ ಬಂದಿರುವ ಆರೋಪಗಳಿಂದ ಮುಕ್ತವಾಗಬೇಕಿದೆ.  ಅವುಗಳೆಲ್ಲ ಆಧಾರ ರಹಿತ ಆರೋಪಗಳಾಗಿದ್ದು,  ಆರೋಪಮುಕ್ತನಾಗಬೇಕಿದೆ ಎಂದಿರುವ ಅವರು,  ಆ ಬಳಿಕವೇ ರಾಜಕೀಯದ ಮಾತು ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲ ಆರೋಪಗಳಿಂದ ಮುಕ್ತವಾದ ಬಳಿಕ ರಾಜಕೀಯಕ್ಕೆ ಬರುವ ಬಗ್ಗೆ ಚಿಂತಿಸುವುದಾಗಿ ಹಾಗೂ ಈ  ಬಗ್ಗೆ ಸಿದ್ಧತೆ ನಡೆಸಿರುವುದಾಗಿ ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا