Urdu   /   English   /   Nawayathi

ನಾನೇಕೆ ಮೋದಿಯವರನ್ನು ಆಲಿಂಗನ ಮಾಡಿದೆ? ಎಂಬುದಕ್ಕೆ ಉತ್ತರಿಸಿದ ರಾಹುಲ್

share with us

ನವದೆಹಲಿ: 25 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಲಿಂಗನ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಜುಲೈ ತಿಂಗಳಲ್ಲಿ ಸಂಸತ್‍ನಲ್ಲಿ ಅವಿಶ್ವಾಸ ನಿರ್ಣಯದ ವೇಳೆ ರಾಹುಲ್ ಮೋದಿಯನ್ನು ಆಲಿಂಗಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ನೀವು ನನ್ನನ್ನು ಲೇವಡಿ ಮಾಡಬಹುದು, ನೀವು ನನ್ನನ್ನು ಪಪ್ಪು ಎಂದು ಕರೆಯಬಹುದು. ಆದರೆ ನಾನು ನಿಮ್ಮ ವಿರುದ್ಧ ದ್ವೇಷ ಕಾರುವುದಿಲ್ಲ. ನಿಮ್ಮ ದ್ವೇಷವನ್ನು ಸ್ವೀಕರಿಸಿ ನಾನು ಅದನ್ನು ಪ್ರೀತಿಯನ್ನಾಗಿ ಪರಿವರ್ತಿಸುತ್ತೇನೆ. ನಾನು ಕಾಂಗ್ರೆಸ್ ಎಂದು  ರಾಹುಲ್ ಹೇಳಿದ್ದರು. ಆದಾಗ್ಯೂ, ದೆಹಲಿಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಶಿಕ್ಷಾ, ದಿಶಾ ಔರ್ ದಶಾ (ಶಿಕ್ಷಣ, ದಿಶೆ ಮತ್ತು ಭವಿಷ್ಯ) ಎಂಬ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್, ಆ ಆಲಿಂಗನದ ಬಗ್ಗೆ ಹೇಳಿದ್ದಾರೆ.

ನಾನು  ಯಾಕೆ ಮೋದಿಯವರನ್ನು ಆಲಿಂಗನ ಮಾಡಿದೆ ಎಂಬುದಕ್ಕೆ ರಾಹುಲ್ ಕೊಟ್ಟ ಉತ್ತರ ಹೀಗಿದೆ . 
ನಿಮ್ಮನ್ನು ಯಾರಾದಾರೂ ದ್ವೇಷಿಸುತ್ತಿದ್ದರೆ, ಅವರ ಬಳಿ ಹೋಗಿ ಅವರನ್ನು ಆಲಿಂಗನ ಮಾಡಿ. ನನ್ನನ್ನು ನಂಬಿ, ಅದೊಂದು ಮ್ಯಾಜಿಕ್. ಅವರೊಂದಿಗೆ  ವಿನಯದಿಂದ ಮಾತನಾಡಿ ಆಮೇಲೆ ನೋಡಿ ಏನಾಗುತ್ತದೆ ಎಂದು. ನಾನು ಮೋದಿಯವರನ್ನು ಆಲಿಂಗನ ಮಾಡಿದೆ. ಅವರನ್ನೂ ಪ್ರೀತಿಸುವವರು ಇದ್ದಾರೆ ಎಂಬುದು ಅವರಲ್ಲಿ ಅಚ್ಚರಿಯನ್ನುಂಟು ಮಾಡಿದ್ದು ನಾನು ಗಮನಿಸಿದೆ. ನಾನು ಮೋದಿಯನ್ನು ದ್ವೇಷಿಸುತ್ತಿಲ್ಲ. ದ್ವೇಷವನ್ನು ಅಂತ್ಯಗೊಳಿಸಲ ನಾನು ಮೋದಿಯನ್ನು ಆಲಿಂಗಿಸಿದೆ, ನಿಜ ಸಂಗತಿ ಏನೆಂದರೆ ಮೋದಿಗೆ ಪ್ರೀತಿಯ ಅಗತ್ಯವಿದೆ. ಹಿಂಸೆ ಯಾವುದಕ್ಕೂ ಪರಿಹಾರವಲ್ಲ, ಎಲ್ಲವನ್ನೂ ಪ್ರೀತಿಯಿಂದಲೇ ಪರಿಹರಿಸಿಕೊಳ್ಳಬೇಕು. ಈ ದೇಶದ ಇತಿಹಾಸವನ್ನು ಮತ್ತು ಗಾಂಧಿ, ಮಹಾವೀರ್, ಬುದ್ಧ, ಅಶೋಕ ಅವರ ತತ್ವಶಾಸ್ತ್ರವನ್ನು ಗಮನಿಸಿ. ಅವರೆಲ್ಲರೂ ಅಹಿಂಸೆ, ಪ್ರೀತಿಯಿಂದ ಸಾಧನೆ ಮಾಡಿದವರು. ಮೋದಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಹೀಯಾಳಿಸುತ್ತಿದ್ದರೂ, ಅದೇ ತತ್ವಶಾಸ್ತ್ರವನ್ನು ಅನುಸರಿಸಿ ನಾನು ಮೋದಿಯನ್ನು ಆಲಿಂಗನ ಮಾಡಿದೆ ಎಂದು ರಾಹುಲ್ ಹೇಳಿರುವುದಾಗಿ ಎಎನ್‍ಐ ವರದಿ ಮಾಡಿದೆ. ಪ್ರಧಾನಿ ಮೋದಿ ದ್ವೇಷವನ್ನು ಖಂಡಿಸಿದರೆ ಸ್ವಾಭಾವಿಕವಾಗಿ  ದೇಶದಲ್ಲಿರುವ ದ್ವೇಷವೂ ಕಡಿಮೆಯಾಗುತ್ತದೆ, ನನ್ನ ಪ್ರಕಾರ  ನಾಯಕತ್ವ ಅಂದರೆ ದೇಶವನ್ನು ಮುನ್ನಡೆಸಬೇಕು ಎಂದಿದ್ದಾರೆ ರಾಹುಲ್. ಈ ವರ್ಷದ ಕೊನೆಯ ಸಂಸತ್ ಅಧಿವೇಶನದಲ್ಲಿ ಭಾಷಣ ಮಾಡಿದ ಮೋದಿ, ನಾನು ಇದೇ ಮೊದಲ ಬಾರಿ ಇಲ್ಲಿಗೆ ಬಂದು ಹಲವಾರು ವಿಷಯಗಳನ್ನು ಕಲಿತಿದ್ದೇನೆ. ಮೊದಲ ಬಾರಿ ನಾನು ಗಲೇ  ಲಗಾನಾ (ಆಲಿಂಗನ ಮಾಡುವುದು) ಮತ್ತು ಗಲೇ ಪಡ್ನಾ (ಮೈ ಮೇಲೆ ಬೀಳುವುದು) ನಡುವಿನ ವ್ಯತ್ಯಾಸ ಅರಿತೆ ಎಂದು ರಾಹುಲ್ ಆಲಿಂಗನವನ್ನು ನೆನಪಿಸಿಕೊಂಡಿದ್ದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا