Urdu   /   English   /   Nawayathi

ಹಿಂಸಾಚಾರ: ಡಿಸಿಎಂ ಮನೆಗೆ ಬೆಂಕಿ, ಪೊಲೀಸರ ಗುಂಡಿಗೆ ಯುವಕ ಬಲಿ

share with us

ಇಟಾನಗರ: 24 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಅರುಣಾಚಲ ಪ್ರದೇಶದವರಲ್ಲದ ಆದಿವಾಸಿಗಳಿಗೆ ರಾಜ್ಯದಲ್ಲಿ ಶಾಶ್ವತವಾಗಿ ನೆಲೆಸಲು ಸರ್ಕಾರ ಅವಕಾಶ ಮಾಡಿಕೊಡುವ ನಿರ್ಧಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರು ನಡೆಸಿದ ಗೋಲಿಬಾರ್​ನಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ನಾಂಸಾಯಿ, ಚನಾಗ್ಲಂಗ್ ಜಿಲ್ಲೆಗಳಲ್ಲಿ ನೆಲೆಸಿರುವ ಆರು ಆದಿವಾಸಿ ಸಮುದಾಯಗಳಿಗೆ ಅರುಣಾಚಲ ಪ್ರದೇಶದಲ್ಲಿ ಖಾಯಂ ಆಗಿ ನೆಲೆಸುವ ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನೀತಿಯನ್ನು ವಿರೋಧಿಸಿ 18 ವಿದ್ಯಾರ್ಥಿ ಹಾಗೂ ನಾಗರಿಕ ಸಮಾಜದ ಸಂಘಟನೆಗಳು ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದವು. ಆದರೆ ಪುಂಡಾಟಿಕೆ ತೋರುವ ಮೂಲಕ ಪ್ರತಿಭಟನಾಕಾರರು ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಪ್ರತಿಭಟನಾಕಾರರು ಇಟಾನಗರದ ಡೆಪ್ಯುಟಿ ಕಮೀಷನರ್​ ಕಚೇರಿ ಹಾಗೂ ಅಗ್ನಿಶಾಮಕ ಠಾಣೆಯನ್ನು ಧ್ವಂಸಗೊಳಿಸಿದ್ದಾರೆ. ಉಪಮುಖ್ಯಮಂತ್ರಿ ಚೌನ ಮೈನ್​ರ ಮನೆಯನ್ನೂ ಧ್ವಂಸಗೊಳಿಸಿ, ಬೆಂಕಿ ಹಚ್ಚಲಾಗಿದೆ. ಡಿಸಿ ಕಚೇರಿ ಬಳಿ ನಿಂತಿದ್ದ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಪ್ರಮುಖ ರಸ್ತೆಗಳನ್ನು ಬಂದ್​ ಮಾಡಿರುವುದರಿಂದ ಜನರು ಪರದಾಡುವಂತಾಗಿದೆ. ಪ್ರತಿಭಟನಾಕಾರರ ಪುಂಡಾಟಿಕೆ ಹತ್ತಿಕ್ಕಲು ಐಟಿಬಿಪಿಯ 6  ಕಂಪನಿ ಭದ್ರತಾ ಸಿಬ್ಬಂದಿಯನ್ನು ಇಟಾ ನಗರದಲ್ಲಿ ನಿಯೋಜಿಸಲಾಗಿದೆ. ಇಟಾನಗರ ಹಾಗೂ ನಹಾರ್ಲಗನ್​ನಲ್ಲಿ ಇಂಟರ್​ನೆಟ್​ ಸೇವೆ ಸ್ಥಗಿತಗೊಳಿಸಲಾಗಿದೆ. ಇನ್ನು ಪೊಲೀಸರ ಫೈರಿಂಗ್​ನಲ್ಲಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಶುಕ್ರವಾರ ಪೊಲೀಸ್​ ವಾಹನ ಸೇರಿ 150ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಇಟ್ಟ ಪ್ರತಿಭಟನಾಕಾರರು, ನಿನ್ನೆ ಕಲ್ಲು ತೂರಾಟ ನಡೆಸಿದ್ದರು. ಇಂದೂ ಕೂಡ ಹಿಂಸಾಚಾರ ಮುಂದುವರೆಸಿದ್ದಾರೆ. 

View image on TwitterView image on TwitterView image on TwitterView image on Twitter

ANI✔@ANI

Arunachal Pradesh: from Itanagar after violence broke outduring protests against state’s decision to grant Permanent Resident Certificates to non-Arunachal Pradesh Scheduled Tribes of Namsai & Chanaglang. 6 companies of ITBP have been deployed in Itanagar

109

5:14 PM - Feb 24, 2019

61 people are talking about this

ANI✔@ANI

Permanent residence certificate row: Violence broke out in Itanagar during protests against state’s decision to grant permanent resident certificates to non- Scheduled Tribes of Namsai & Chanaglang; Deputy CM Chowna Mein's private house also vandalised.

146

3:01 PM - Feb 24, 2019

102 people are talking about this

View image on TwitterView image on TwitterView image on Twitter

ANI✔@ANI

Permanent residence certificate row: Police station and a fire station in Itanagar vandalized after violence broke out during a strike called by 18 student&civil society orgs. Protesters allege a youth was also killed in police firing.

56

2:56 PM - Feb 24, 2019

20 people are talking about this

View image on TwitterView image on Twitter

ANI✔@ANI

Itanagar: Police station and a fire station vandalized after violence broke out during a strike called by 18 student&civil society orgs against state’s decision to grant permanent resident certificates to non-Arunachal Pradesh Scheduled Tribes of Namsai & Chanaglang

117

2:49 PM - Feb 24, 2019

42 people are talking about this

View image on TwitterView image on TwitterView image on TwitterView image on Twitter

ANI✔@ANI

Permanent residence certificate row: 6 companies of Indo-Tibetan Border Police (ITBP) have been deployed in Itanagar, Arunachal Pradesh to restore law and order situation. Section 144 (prohibits assembly of more than 4 people in an area) has also been imposed

167

5:51 PM - Feb 24, 2019

48 people are talking about this

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا