Urdu   /   English   /   Nawayathi

ರೈಲು ಏರುವ ವೇಳೆ ಕುಸಿದ ಯುವತಿ... ಜೀವ ಕಾಪಾಡಿದ ಆಪತ್ಬಾಂಧವರು -ವಿಡಿಯೋ

share with us

ಮುಂಬೈ: 24 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ದೇವರು ಯಾವ ರೂಪದಲ್ಲಿ ಬಂದು ಕಾಪಾಡುತ್ತಾನೆ ಎಂದು ಹೇಳಲಿಕ್ಕಾಗದು. ನಸೀಬು ಚೆನ್ನಾಗಿದ್ದರೆ ಯಮ ಬಂದು ಎದುರಿಗೇ ನಿಂತರೂ, ಯಾರೋ ದೇವರಂತೆ ಕಾಪಾಡಿಬಿಡುತ್ತಾರೆ. ಮುಂಬೈನಲ್ಲಿ ರೈಲ್ವೆ ನಿಲ್ದಾಣದಲ್ಲಿ ಇಂತಹುದೇ ಘಟನೆಯೊಂದು ನಡೆದಿದೆ. ಶುಕ್ರವಾರ ಮುಂಬೈನ ಮಲಾದ್​ ರೈಲ್ವೆ ನಿಲ್ದಾಣದಲ್ಲಿ ಜನರು ರೈಲು ಹತ್ತುವ ಧಾವಂತದಲ್ಲಿದ್ದರು. ಜನರು ಹತ್ತುತ್ತಿರುವಾಗಲೇ ರೈಲು ಮುಂದಕ್ಕೆ ಚಲಿಸಿದೆ. ಯುವತಿವೋರ್ವಳು ಚಲಿಸುತ್ತಿದ್ದ ರೈಲನ್ನು ಏರಲು ಹೆಜ್ಜೆ ಇಡುತ್ತಿದ್ದಂತೆ ಅಲ್ಲಿಯೇ ಕುಸಿದಿದ್ದಾಳೆ. ಇನ್ನೇನು ರೈಲಿನಡಿ ಯುವತಿ ಸಿಲುಕಬೇಕು ಅನ್ನುವಷ್ಟರಲ್ಲಿ ಮತ್ತೋರ್ವ ಪ್ರಯಾಣಿಕ ಹಾಗೂ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿವೋರ್ವರು ಆಕೆಯನ್ನು ಕಾಪಾಡಿದ್ದಾರೆ. ಕ್ಷಣಾರ್ಧದಲ್ಲಿ ಜೀವವನ್ನೇ ಕಳೆದುಕೊಳ್ಳುತ್ತಿದ್ದ ಯುವತಿ, ಆಪತ್ಬಾಂಧವರಾಗಿ ಜೀವ ಉಳಿಸಿದವರಿಗೆ ಧನ್ಯವಾದ ತಿಳಿಸಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಖತ್​ ವೈರಲ್​ ಆಗಿದೆ.  

 

ANI✔@ANI

: A passenger rescued from falling by another passenger & a Railway Protection Force (RPF) personnel, while she was trying to board a train at Malad Railway Station in Mumbai. (22.02.19)

371

2:23 PM - Feb 24, 2019

103 people are talking about this

https://youtu.be/W8Sl1wWyHYI

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا