Urdu   /   English   /   Nawayathi

ಪಾಕಿಸ್ತಾನದಿಂದ ಭಾರತ ಮೇಲೆ ಪರಮಾಣು ದಾಳಿ ಆಗಲ್ಲ- ಮುಷರಪ್

share with us

ಅಬುದಾಬಿ: 23 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಎರಡು ಪರಮಾಣು ರಾಷ್ಟ್ರಗಳ ನಡುವಿನ  ಸಂಬಂಧ ಅಪಾಯದ ಹಂತ ತಲುಪಿದರೆ ಪಾಕಿಸ್ತಾನ ಭಾರತದ ಮೇಲೆ ಪರಮಾಣು ದಾಳಿ ನಡೆಸಲಿದೆ ಎಂಬ ಪ್ರಸ್ತಾವವನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಪ್ ನಿರಾಕರಿಸಿದ್ದಾರೆ. ಒಂದು ವೇಳೆ ಪಾಕಿಸ್ತಾನ  ಭಾರತದ ಮೇಲೆ ಒಂದು ಅಟೋಮಿಕ್ ಬಾಂಬ್ ಹಾಕಿದ್ದರೆ ಭಾರತ 20 ಬಾಂಬ್ ಗಳನ್ನು ಹಾಕಿ ನಮ್ಮನ್ನು ನಿರ್ನಾಮ ಮಾಡಲಿದೆ ಎಂದು ಅವರು ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಅಬುದಾಬಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಷರಪ್, ಭಾರತ ಮತ್ತು ಪಾಕಿಸ್ತಾನದ ಸಂಬಂಧ ಮತ್ತೆ ಅಪಾಯದ ಹಂತ ತಲುಪಿದೆ. ಯಾವುದೇ ಪರಮಾಣು ದಾಳಿ ನಡೆಯಲ್ಲ, ಒಂದು ವೇಳೆ ನಾವು ಒಂದು ಅಟೋಮಿಕ್ ಬಾಂಬ್  ಹಾಕಿದರೆ, ಭಾರತ ನಮ್ಮ ಮೇಲೆ 20 ಬಾಂಬ್ ಗಳನ್ನು ಹಾಕಲಿದೆ. ಆದ್ದರಿಂದ ನಾವು ಅವರ ಮೇಲೆ ಮೊದಲು 50 ಬಾಂಬ್ ಗಳನ್ನು ಹಾಕಬೇಕು, ಅದರಿಂದ ಮೊದಲು 50 ಬಾಂಬ್ಗಳನ್ನು ಹಾಕಲು ಪಾಕಿಸ್ತಾನ ಸಿದ್ದ ಇದೆಯಾ? ಎಂದು ಕೇಳಿದ್ದಾರೆ.  ಪಾಕಿಸ್ತಾನದೊಂದಿಗೆ ಇಸ್ರೇಲ್ ಸಂಬಂಧ ವೃದ್ದಿಯಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟಿರುವ ಮುಷರಪ್, ಪಾಕಿಸ್ತಾನದಲ್ಲಿನ ರಾಜಕೀಯ ಪರಿಸ್ಥಿತಿ ಉತ್ತಮವಾಗಿದೆ. ಅರ್ಧದಷ್ಟು ಸಚಿವರು ನಮ್ಮವರಾಗಿದ್ದಾರೆ. ಕಾನೂನು ಸಚಿವ ಮತ್ತು ಅಟಾರ್ನಿ ಜನರಲ್ ಅವರು ನಮ್ಮ ವಕೀಲರಾಗಿದ್ದಾರೆ ಎಂದು ಮುಷರಪ್ ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا