Urdu   /   English   /   Nawayathi

16 ಗಂಟೆಗಳ ಸತತ ಕಾರ್ಯಾಚರಣೆ ನಂತರ ಬೋರ್ ವೆಲ್ ನಲ್ಲಿ ಬಿದ್ದಿದ್ದ ಬಾಲಕನ ರಕ್ಷಣೆ

share with us

ಪುಣೆ: 21 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಜಿಲ್ಲಾಯ ಅಂಬೇಗಾಂವ್ ತೆಹಶೀಲ್‍ಗ್ರಾಮವೊಂದರಲ್ಲಿ 200 ಅಡಿ ಆಳದ ರ್ಬೋ ವೆಲ್ ಗೆ ಬಿದ್ದಿದ್ದ ಆರು ವರ್ಷದ ಬಾಲಕನನ್ನು 16 ತಾಸುಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ. ಬಾಲಕನು ರಸ್ತೆ ನಿರ್ಮಾಣ ಕಾರ್ಮಿಕರೊಬ್ಬರ ಪುತ್ರ ಎಂದು ತಿಳಿದು ಬಂದಿದೆ. ಬಾಲಕನನ್ನು ಮೇಲಕ್ಕೆತ್ತಿ ರಕ್ಷಿಸುವ ಕಾರ್ಯಾಚರಣೆಯು ನಿನ್ನೆ ಸಂಜೆ ಆರಂಭಗೊಂಡಿದ್ದು, ಎನ್‍ಡಿಆರ್‍ಎಫ್ ಈ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಬಾಲಕನು ನಿನ್ನೆ ಸಂಜೆ 4.45ರ ಸುಮಾರಿಗೆ ಬೋರ್ ವೆಲ್ ಪಕ್ಕದಲ್ಲಾೀ ಆಡಿಕೊಂಡಿದ್ದಾಗ ಆಕಸ್ಮಿಕವಾಗಿ ಬಾಯಿ ತೆರೆದುಕೊಂಡಿದ್ದ ಬೋರ್‍ವೆಲ್‍ಗೆ ಬಿದ್ದಿದ್ದ. ಆ ಸಂದರ್ಭದಲ್ಲಿ ಆತನ ತಂದೆ ರಸ್ತೆ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದರು. ರಕ್ಷಿಸಲ್ಪಟ್ಟ ಬಾಲಕ ಆರೋಗ್ಯವಾಗಿದ್ದಾನೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا