Urdu   /   English   /   Nawayathi

ಸೌದಿ ದೊರೆಯೊಂದಿಗೆ ಪ್ರಧಾನಿ ಮೋದಿ, ಸುಷ್ಮಾ ಸ್ವರಾಜ್ ದ್ವಿಪಕ್ಷೀಯ ಮಾತುಕತೆ

share with us

ನವದೆಹಲಿ: 20 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಭಾರತ ಪ್ರವಾಸದಲ್ಲಿರುವ ಸೌದಿ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರನ್ನು ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವೆ ಸ್ವರಾಜ್ ಅವರು ಸ್ವಾಗತಿಸಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.  ದ್ವಿಪಕ್ಷೀಯ ಮಾತುಕತೆ ವೇಳೆ ಉಭಯ ದೇಶಗಳ ನಾಯಕರು ಒಪ್ಪಂದಗಳ ವಿನಿಮಯ ಹಾಗೂ ಜಂಟಿ ಪತ್ರಿಕಾ ಹೇಳಿಕೆ ನೀಡಲಿದ್ದಾರೆ. ಇದಕ್ಕೂಮುನ್ನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಸೌದಿ ರಾಜಕುಮಾರ ಅವರನ್ನು ಭೇಟಿ ಮಾಡಿದ್ದರು. ಇಬ್ಬರು ನಾಯಕರು ವ್ಯಾಪಾರ, ಹೂಡಿಕೆ ರಕ್ಷಣೆ ಹಾಗೂ ಪ್ರಾದೇಶಿಕ ಸಹಕಾರ ಸಂಬಂಧಿಸಿದ  ವಿಷಯಗಳನ್ನು ಚರ್ಚಿಸಿದರು. ಇನ್ನು ಈ ಭೇಟಿ ಕುರಿತಂತೆ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು ಇಬ್ಬರೂ ನಾಯಕರ ಫೋಟೋ ಲಗತ್ತಿಸಿ ಟ್ವೀಟ್ ಮಾಡಿದ್ದು, ಭಾರತ ಸರ್ಕಾರ ಸೌದಿಯೊಂದಿಗೆ ರೋಮಾಂಚಕ ಹಾಗೂ ದೂರದೃಷ್ಟಿಯ ಮತ್ತು ಅತ್ಯುತ್ತಮ ಬಾಂಧವ್ಯ ಎದುರು ನೋಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಸುಷ್ಮಾ ಮತ್ತು ಸೌದಿ ದೊರೆಗಳ ಭೇಟಿ ಕುರಿತು ಟ್ವೀಟ್ ಮಾಡಿರುವ ಅವರು, 'ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸೌದಿ ದೊರೆ ಮಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿ ಮಾಡಿ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ ಹಾಗೂ ಪ್ರಾದೇಶಿಕ ಸಹಕಾರ ವಲಯದಲ್ಲಿ ನಮ್ಮ ಬಾಂಧವ್ಯ ಕುರಿತ  ವ್ಯೂಹಾತ್ಮಕ ಆಯಾಮಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಇಂದು ಸಂಜೆ ಸೌದಿ ದೊರೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.  ಭಾರತ ಹಾಗೂ ಸೌದಿ ಅರೆಬಿಯಾ ನಡುವಣ ಗಟ್ಟಿ ಬಾಂಧವ್ಯ ನಮ್ಮ ಡಿಎನ್ಎ ನಲ್ಲಿಯೇ ಅಡಗಿದೆ. ಭಾರತ ಹಾಗೂ ಸೌದಿ ಅರೆಬಿಯಾ ನಡುವಣ ಗಟ್ಟಿ ಬಾಂಧವ್ಯ ನಮ್ಮ ಡಿಎನ್ಎ ನಲ್ಲಿಯೇ ಅಡಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆಯನ್ನು ಸೌದಿ ದೊರೆ ಅನುಮೋದಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡ ನಂತರ  ಮಾತನಾಡಿದ ಸೌದಿ ರಾಜಕುಮಾರ, ಎರಡು ದೇಶಗಳ ನಡುವೆ ಪುರಾತನ ಕಾಲದಿಂದಲೂ ಬಾಂಧವ್ಯವಿದೆ. ಉಭಯ ದೇಶಗಳ ಹಿತದೃಷ್ಟಿಯಿಂದ ಈ ಬಾಂಧವ್ಯವನ್ನು ಕಾಪಾಡಿಕೊಂಡು ಅದನ್ನು ಮತ್ತಷ್ಟು ಬಲಗೊಳಿಸಬೇಕಾಗಿದೆ ಎಂದರು. ಭಾರತ ಹಾಗೂ ಅರೆಬಿಯಾ ನಡುವಣ ಬಾಂಧವ್ಯ 2000 ವರ್ಷಗಳ ಪುರಾತನದಷ್ಟು ಹಳೆಯದಾಗಿದ್ದು, ಇತಿಹಾಸ ಬರೆಯುವುದಕ್ಕೆ ಮುನ್ನವೇ ಎರಡು ದೇಶಗಳ ನಡುವಣ ಸಂಬಂಧ ಇತ್ತು ಎಂದು ಹೇಳಿದರು.

View image on TwitterView image on TwitterView image on Twitter

ANI✔@ANI

Saudi Arabia Crown Prince Mohammed bin Salman and Prime Minister Narendra Modi in Delhi

309

12:36 PM - Feb 20, 2019

81 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا