Urdu   /   English   /   Nawayathi

ಪುಲ್ವಾಮ ದಾಳಿಗೆ ಕೇಂದ್ರ ಸರ್ಕಾರದ ವೈಪಲ್ಯವೇ ಕಾರಣ ಎಂದ ಸಿದ್ದರಾಮಯ್ಯ

share with us

ಬೆಂಗಳೂರು, ಫೆ.19- ಪುಲ್ವಾಮದಲ್ಲಿ ಸಿ ಆರ್ ಪಿ ಎಫ್ ಯೋಧರ ಮೇಲೆ ಉಗ್ರರು ದಾಳಿ ಮಾಡಿ ಹತ್ಯೆಗೈದಿರುವುದು ಕೇಂದ್ರ ಸರ್ಕಾರದ ವೈಪಲ್ಯ ಎಂದು ಮಾಜಿ ಮುಖ್ಯಮಂತ್ರಿ‌ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ಅರಮನೆ ಮೈದಾನದಲ್ಲಿಂದು ಯುವ ಕಾಂಗ್ರೆಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಸ್ತ್ರತ ಸರ್ವ ಸದಸ್ಯರ ಸಭೆಯಲ್ಲಿ ಮಾಡನಾಡಿದ ಅವರು, ಬಿಜೆಪಿ ಯೋಧರ ಹತ್ಯೆಗೂ ಬಣ್ಣ ಕಟ್ಟಿ ರಾಜಕೀಯ ಲಾಭ‌ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ಟೀಕಿಸಿದರು. ಪಾಕಿಸ್ತಾನಕ್ಕೆ ಭಯ ಹುಟ್ಟಿಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. 1971ರಲ್ಲಿ ಇಂದಿರಾ ಗಾಂಧಿ ಪಾಕ್ ಮೇಲೆ ಯುದ್ಧ ಮಾಡಿ ಬಾಂಗ್ಲಾವನ್ನು ಬೇರೆ ಮಾಡಿದ್ದರು. ಆಗ ವಾಜಪೇಯಿ ಸಂಸತ್ ನಲ್ಲಿ ಇಂದಿರಾ ಗಾಂಧಿಯನ್ನು ದುರ್ಗಿ ಎಂದು ಹೊಗಳಿದರು. ಮೋದಿ ಅವರಿಗೆ ಇದ್ದೇಲ್ಲವೂ ಗೋತ್ತಿಲ್ವಾ ಎಂದು ಪ್ರಶ್ನಿಸಿದರು. ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿ ಆದಮೇಲೆ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಜೆ ದೊಡ್ಡ ಗಂಡಾಂತರ ಎದುರಾಗಿದೆ. ಪ್ರತಿಯೊಬ್ಬ ಭಾರತೀಯನು ಪ್ರಜಾಪ್ರಭುತ್ವ ರಕ್ಷಣೆಗೆ ಮುಂದಾಗಬೇಕು. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಯೋಗ್ಯ ಸಂವಿಧಾನವನ್ನು ಬಾಬಾ ಸಾಹೇಬರು ರಚಿಸಿಕೊಟ್ಟಿದ್ದಾರೆ. ಜರ್ಮನಿಯ ಹಿಟ್ಲರ್ ನಂತೆ ಬಿಜೆಪಿಯವರು ಫ್ಯಾಸಿಸ್ಟ್ ಸಂಸ್ಕ್ರತಿಯ ಮೇಲೆ ನಂಬಿಕೆ ಇರುವ ಜನ. ಅವರಿಗೆ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆ ಇಲ್ಲದ ಪಕ್ಷ. ಕಾಂಗ್ರೆಸ್ ಸಾಮಾಜಿಕ ನ್ಯಾಯ ಕೊಡಲು‌ ಪ್ರಯತ್ನಿಸಿದಾಗಲಲ್ಲೆ ಬಿಜೆಪಿ ವಿರೋಧ ಮಾಡಿದೆ. ಬ್ರಿಟಿಷರಂತೆ ಒಡೆದು ಆಳುವ ನೀತಿಯಲ್ಲಿ ನಂಬಿಕೆ ಇಟ್ಟುಕೊಂಡ ಬಿಜೆಪಿ ಸಮಾನ ಸಮಾಜಕ್ಕೆ ವಿರುದ್ದವಿದೆ. ಅದಕ್ಕಾಗಿ ನಾವು ಬಿಜೆಪಿಯನ್ನ ಕೋಮುವಾದಿ, ಪ್ಯಾಸಿಸ್ಟ್ ಪಕ್ಷ ಎಂದು ಕರೆಯುತ್ತೇವೆ.‌ಅವರು ಅಧಿಕಾರಕ್ಕೆ ಬಂದಾಗಲೆಲ್ಲಾ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಜಾರಿ ತರಲು ಪ್ರಯತ್ನಿಸಿದ್ದಾರೆ.‌ ಹಿಂದೆ ವಾಜಪೇಯಿ ಮತ್ತು ಈಗೀನ ಮೋದಿ ಸರ್ಕಾರದಲ್ಲೂ ಅದು ಸಾಬೀತಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಸಮ ಸಮಾಜದ ಮೇಲೆ ನಂಬಿಕೆ ಇಟ್ಟುಕೊಂಡ‌ ಪಕ್ಷ. ಬಿಜೆಪಿ ಸುಳ್ಳಿನ ಪ್ರಚಾರ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದೆ. ನಾವು ಸತ್ಯ ಹೇಳಿದರೆ ಸಾಕು ಜನ ನಮ್ಮನ್ನು ಬೆಂಬಲಿತ್ತಾರೆ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನಲ್ಲೂ ಪಕ್ಷದ ಸಿದ್ಧಾಂತ, ನಿಲುವುಗಳ ಬಗ್ಗೆ ಸ್ಪಷ್ಟತೆ ಇರಬೇಕು. ನಾನು ಮೂಲ ಕಾಂಗ್ರೆಸಿಗನಲ್ಲ. ಸಮಾಜವಾದಿ ಚಳವಳಿಯಿಂದ ಬಂದವನು. ಎಂದಿಗೂ ನಾನು ನನ್ನ ಸಿದ್ದಾಂತದಲ್ಲಿ‌ ರಾಜಿ ಮಾಡಿಕೊಂಡಿಲ್ಲ ಎಂದರು. ಬಿಜೆಪಿ ಹೊರಗೆ ಕಾಣಿಸುವ ಬಣ್ಣ ನಿಜವಾದದ್ದಲ್ಲ, ಆಂತರಿಕ ಬಣ್ಣ ಬೇರೆ ಇದೆ. ಅದನ್ನು ಮನೆ ಮನೆಗೆ ತಲುಪಿಸಬೇಕು. ಬಿಜೆಪಿ ಕೇವಲ ಸುಳ್ಳುವುದು‌ ಮತ್ತು ಇನ್ನೊಬ್ಬರ ತೇಜೋವಧೆ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದೆ. ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತಂದು ಆರ್ ಟಿ ಇ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಮೋದಿ‌ ಮೆಕ್ ಇನ್ ಇಂಡಿಯಾ ಎಂದು ಹೇಳಿ ಕಾಲ ಹರಣ ಮಾಡುತ್ತಿದ್ದಾರೆ. ವರ್ಷಕ್ಕೆ ಎರಡು‌ ಕೋಟಿ ಉದ್ಯೋಗ ಸೃಷ್ಟಿ ಮಸುವುದಾಗಿ ಹೇಳಿದ್ದರು. ಅದರಂತೆ ಈವರೆಗೂ 10 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಅದು ಆಗಿದ್ಯಾ ಎಂದು ಪ್ರಶ್ನಿಸಿದ್ದರು.  ಶೇ.12ರಷ್ಠಿದ್ದ ಅಕ್ಷರತೆಯನ್ನು ಶೇ.73ಕ್ಕೆ ಹೆಚ್ಚಿಸಿದ್ದು, ಆಹಾರ ಸ್ವಾವಲಂಬನೆ ಸಾಧಿಸಿದ್ದು ಕಾಂಗ್ರೆಸ್ ಸರ್ಕಾರ ಕಾರಣ. ಹಲವಾರು ಅಣೆಕಟ್ಟು, ನೀರಾವರಿ ಆಗಿದ್ರೆ ಅದಕ್ಕೆ ಕಾಂಗ್ರೆಸ್ ಕಾರಣ. ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. 55 ವರ್ಷದ ಕಾಂಗ್ರೆಸ್ ಸರ್ಕಾರದಲ್ಲಿ ಆಗದನ್ನ 55 ತಿಂಗಳಲ್ಲಿ ಮೋದಿ ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ.‌ ಮೋದಿ ಆಡಳಿತದಲ್ಲಿ ಯಾವ ಅಭಿವೃದ್ಧಿಯಾಗಿದೆ ಎಂದು ಪ್ರಶ್ನಿಸಿದರು. ರೈತರ ಸಾಲ ಮನ್ನಾ ಮಾಡಲಿಲ್ಲ. ನಾನು ಇಲ್ಲಿಂದ ನಿಯೋಗ ಕರೆದುಕೊಂದು ಹೊಗಿ ರೈತರ ಸಾಲ ಮನ್ನಾ ಮಾಡುವಂತೆ ಕೈ ಮುಗಿದು ಬೇಡಿಕೊಂಡೆ. ಪುಣ್ಯಾತ್ಮ ಜಪ್ಪಯ್ಯ ಅಂದ್ರೂ ಒಪ್ಪಲಿಲ್ಲ.‌ ಮೋದಿ ಪುಣ್ಯಾತ್ಮ ಅಲ್ಲ ದುರಾತ್ಮ ಎಂದು ಟೀಕಿಸಿದರು. ಬಿಜೆಪಿಯ ರಾಜ್ಯ ನಾಯಕರು ಅವತ್ತು‌ಮೋದಿ‌ ಮುಂದೆ ತುಟಿ ಬಿಚ್ಚಲಿಲ್ಲ. ಇಲ್ಲಿ ಯಡಿಯೂರಪ್ಪ ಹಸಿರು ಶಾಲು ಹೊದ್ದು ನಾಟಕವಾಡುತ್ತಾರೆ.

ಯಡಿಯೂರಪ್ಪ ರೈತನ ಮಗನಲ್ಲ, ಡೊಂಗಿ ರೈತ‌ನಾಯಕ. ನಾವು ನಿಜವಾದ ರೈತನ ಮಕ್ಕಳು ಎಂದು ಲೇವಡಿ ಮಾಡಿದರು. ಡೊಂಗಿಗಳಾದ ಯಡಿಯೂರಪ್ಪ, ಮೋದಿ ಅವರ ಬಣ್ಣ ಬಯಲಾಗಬೇಕು. ಮಾತೆತ್ತಿದರೆ ತನ್ನನ್ನು ತಾನು ಚೌಕಿದಾರ ಎಂದು‌ ಕರೆದುಕೊಳ್ಳುತ್ತಾರೆ, ಆತ ಚೌಕಿದಾರ್ ಅಲ್ಲ ಭ್ರಷ್ಟಚಾರದ‌ ಭಾಗಿದಾರ್. ರಫಾಯಲ್ ಖರೀದಿಯಲ್ಲಿ 39 ಸಾವಿರ ಕೋಟಿ ಹಗರಣ ಆಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟು ದೊಡ್ಡ ಹಗರಣ ನಡದಿರಲಿಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ಸೇರಿದಂತೆ ಸಾಲು ಸಾಲು ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ. ಹಾಗಿದ್ದರೆ ಇವರು ಚೌಕಿದಾರ್ ಹೇಗೆ ಆಗುತ್ತಾರೆ ಎಂದು ಪ್ರಶ್ನಿಸಿದರು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿ ಕೊಡುವ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇದು ನಾನು‌ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದ ರೈತ ಬೆಳಕು ಯೋಜನೆಯ ನಕಲಾಗಿದೆ ಎಂದರು. ನಾನು ಮಂಡಿಸಿದ್ದ ಬಜೆಟ್ ನಲ್ಲಿ ಪ್ರತಿ ಎಕರೆಗೆ ಐದು ಸಾವಿರದಂತೆ ಎರಡು ಎಕರೆಗೆ ಹತ್ತು ಸಾವಿರ ನೀಡುವ ರೈತ ಬೆಳಕು ಯೋಜನೆಯನ್ನು ನಾನೇ ಘೋಷಣೆ ಮಾಡಿದ್ದೆ. ಈಗ ಅದನ್ನ ಅವರು ಬದಲಾವಣೆ ಮಾಡಿ ಐದು ಎಕರೆಗೆ ವರ್ಷಕ್ಕೆ ಆರು ಸಾವಿರ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಜನ ಇದನ್ನೇಲ್ಲಾ ನಂಬಲ್ಲ. ಅವರಪ್ಪನಾಣೆ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು. ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಲು ಬಿಜೆಪಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಅಷ್ಟೊಂದು ಹಣ ಎಲ್ಲಿಂದ ಬಂತು ಎಂದು ಹೇಳಬೇಕಲ್ಲ ಎಂದರು. ನಾವು ಈ ಹಿಂದೆ ಜಾರಿಗೆ ತಂದ ಸಾಲು ಸಾಲು ಯೋಜನೆಗಳನ್ನು ಜನರಿಗೆ ತಿಳಿಸಿದರೆ ಸಾಕು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್150 ಸ್ಥಾನ ಗೆದ್ದು ರಾಹುಲ್ ಗಾಂಧಿ ಪ್ರಧಾನಿಯಾಗುವುದು ಖಚಿತ ಎಂದು ಹೇಳಿದರು.  ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮೋದಿಗೆ ಸಾಧ್ಯವಿಲ್ಲ. ಇತ್ತೀಚೆಗೆ ನಡದ ವಿಧಾನಸಭೆ ಚುನಾವಣೆಯಲ್ಲಿ ಮೋದಿಗೆ ಜನ ಬುದ್ದಿ ಕಲಿಸಿದ್ದಾರೆ ಎಂದು ಹೇಳಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا