Urdu   /   English   /   Nawayathi

ಬೇರೆ ರಾಜ್ಯಗಳಲ್ಲಿರುವ ಕಾಶ್ಮೀರಿಗರಿಗೆ ಆತಂಕ... ಭದ್ರತೆ ನೀಡುವಂತೆ ಕೇಂದ್ರ ಸೂಚನೆ

share with us

ನವದೆಹಲಿ: 17 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಪುಲ್ವಾಮಾದಲ್ಲಿ ನಡೆದ ಅತ್ಯುಗ್ರ ದಾಳಿಯ ಬೆನ್ನಲ್ಲೇ ವಿವಿಧ ರಾಜ್ಯಗಳಲ್ಲಿರುವ ಕಾಶ್ಮೀರಿ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಅನುಮಾನದಿಂದ ನೋಡುವಂತಾಗಿದೆ. ಕಾಶ್ಮೀರಿಗರ ಮೇಲೆ ದೌರ್ಜನ್ಯ ಸಹ ನಡೆಯುತ್ತಿದೆ ಎಂದು ವರದಿಯಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ಗೃಹ ಸಚಿವಾಲಯವು, ಆತಂಕದಲ್ಲಿರುವವರಿಗೆ ಭದ್ರತೆ ಒದಗಿಸುವ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೂಚನೆ ನೀಡಿದೆ.  ಡೆಹರಾಡೂನ್​ನ ಬಾಡಿಗೆ ಮನೆಯಲ್ಲಿ ವಾಸವಿರುವ ಕಾಶ್ಮೀರಿ ಯುವಕರಿಗೆ ಮಾಲೀಕರು ಕೂಡಲೇ ಮನೆ ಖಾಲಿ ಮಾಡುವಂತೆ  ಬಲವಂತ ಮಾಡುತ್ತಿರುವುದಾಗಿ ವರದಿಯಾಗಿದೆ. ಹರಿಯಾಣದಲ್ಲಿಯೂ ಇಂತಹುದೇ ಪ್ರಕರಣ ಕೇಳಿಬಂದಿದೆ. ಈ ಬಗ್ಗೆ ಡೆಹರಾಡೂನ್​ ಪೊಲೀಸರು ಕಾಶ್ಮೀರಿ ಪೊಲೀಸರೊಂದಿಗೆ ಮಾತುಕತೆ ಸಹ ನಡೆಸಿದ್ದಾರೆ. ಇನ್ನು ಕಾಶ್ಮೀರಿ ಪೊಲೀಸರು ಬೇರೆ ರಾಜ್ಯಗಳಲ್ಲಿರುವ ಕಾಶ್ಮೀರದ ಜನರಿಗೆ ನೆರವು ನೀಡುವ ಬಗ್ಗೆ ಸೋಶಿಯಲ್​ ಮಿಡಿಯಾಗಳಲ್ಲಿ ಮಾಹಿತಿ ಪ್ರಕಟಿಸಿದ್ದಾರೆ. ಹೆಲ್ಪ್​ಲೈನ್​ ನಂಬರ್​ಗಳನ್ನು ಸಹ ನೀಡಲಾಗಿದೆ. ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಓಮರ್​ ಅಬ್ದುಲ್ ಹಾಗೂ ಮೆಹಬೂಬ್​ ಮುಫ್ತಿ ಅವರು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ.  

View image on Twitter

CRPF Madadgaar@CRPFmadadgaar

students and general public, presently out of can contact @CRPFmadadgaar on 24x7 toll free number 14411 or SMS us at 7082814411 for speedy assistance in case they face any difficulties/harrasment. @crpfindia @HMOIndia @JKZONECRPF @jammusector @crpf_srinagar

8,771

8:08 PM - Feb 16, 2019

6,154 people are talking about this

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا