Urdu   /   English   /   Nawayathi

'ಪಾಕಿಸ್ತಾನ ದುಬಾರಿ ಬೆಲೆ ತೆರಬೇಕಾಗುತ್ತೆ'... ಯೋಧರ ಮೇಲಿನ ದಾಳಿಗೆ ಇರಾನ್​ ವಾರ್ನ್​​!

share with us

ದುಬೈ: 17 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ನರಿ ಬುದ್ಧಿಯ ಪಾಕಿಸ್ತಾನದ ಮೇಲೆ ಈಗ ಇರಾನ್‌ ಸೇನಾ ಮುಖ್ಯಸ್ಥ ಮೊಹ್ಮದ್‌ ಅಲಿ ಜಫಾರಿ ಬೆಂಕಿ ಉಗುಳಿದ್ದಾನೆ. ಉಗ್ರರ ಮೂಲಕ ತೆರೆಮರೆ ಯುದ್ಧ ನಡೆಸುವ ಭೂಲೋಕದ ಪಾಪಿಗಳಸ್ಥಾನಕ್ಕೆ ತಕ್ಕ ಬುದ್ಧಿ ಕಲಿಸೋದಾಗಿ ಅಬ್ಬರಿಸಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ಇರಾನ್​​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿಗೆ 27 ಯೋಧರು ಬಲಿಯಾಗಿದ್ದರು. ಇದು ಪಾಕ್‌ ಮೇಲೆ ಉರಿದು ಬೀಳೋದಕ್ಕೆ ಬಹುಮುಖ್ಯ ಕಾರಣ. ಹಾಗಾಗಿಯೇ ಮೊಹಮ್ಮದ್​ ಅಲಿ ಜಫಾರಿ, ಇರಾನ್‌ ಮೇಲೆ ನಡೆಸಿದ ಆತ್ಮಹತ್ಯಾ ಬಾಂಬ್‌ ದಾಳಿಗೆ 'ಪಾಕಿಸ್ತಾನ ದುಬಾರಿ ಬೆಲೆ ತೆರಬೇಕಾಗುತ್ತೆ' ಎಂದು ವಾರ್ನ್​ ಮಾಡಿದ್ದಾರೆ. ಪಾಕಿಸ್ತಾನ​ ಭಯೋತ್ಪಾದನೆ ವಿರುದ್ಧ ಯಾವುದೇ ಕ್ರಮಕೈಗೊಳ್ಳಲು ಸಿದ್ಧವಿಲ್ಲ. ಆದರೆ, ನಮ್ಮ ಹುತಾತ್ಮ ಯೋಧರ ರಕ್ತಕ್ಕೆ ನಾವು ಸೇಡು ತೀರಿಸಿಕೊಳ್ಳಲಿದ್ದು, ಅದಕ್ಕಾಗಿ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ಜಫಾರಿ ಪಾಕ್‌ ವಿರುದ್ಧ ವಿರುದ್ಧ ಗುಡುಗಿದ್ದಾನೆ. ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಅಂತಿಮ ನಮನ ಸಲ್ಲಿಸಿದ ಇರಾನ್‌ ಸೇನಾ ಮುಖ್ಯಸ್ಥ, ಈ ಹಿಂದೆ ಪಾಕ್​ ಯಾವುದೇ ಕಾರಣಕ್ಕೂ ಗಡಿಯಲ್ಲಿ ಉಗ್ರ ಚಟುವಟಿಕೆ ನಡೆಯದಂತೆ ನೋಡಿಕೊಳ್ಳುವುದಾಗಿ ಹೇಳಿತ್ತು. ಆದರೆ, ಅದು ತನ್ನ ಹಳೇ ಚಾಳಿ ಮುಂದುವರೆಸಿದೆ ಅಂತ ಜಫಾರಿ ಆರೋಪಿಸಿದ್ದಾನೆ. ಇನ್ನು ಎರಡು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಭೀಕರ ಕೃತ್ಯಕ್ಕೆ ಭಾರತದ 49 ವೀರ ಯೋಧರು ಹುತಾತ್ಮರಾಗಿದ್ದು, ಇಭಯೋತ್ಪಾದಕರ ಕೃತ್ಯಕ್ಕೆ ಈಗಾಗಲೇ ಅನೇಕ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. 

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا