Urdu   /   English   /   Nawayathi

ಆಕಸ್ಮಿಕವಾಗಿ ವಾಹನದಲ್ಲಿ ಹತ್ತಿ ಉರಿದ ಬೆಂಕಿ

share with us

ಕಡಬ: 14 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಇಂದು ಬೆಳಿಗ್ಗೆ ಕಡಬದ ಕಲ್ಲುಗುಡ್ಡೆ ರಸ್ತೆಯ ಮುಲಿಮಜಲುವಿನಲ್ಲಿ ಟಾಟಾ ಮ್ಯಾಜಿಕ್ ವಾಹನದಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ವಾಹನ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎನ್ನಲಾಗಿದೆ. ಜಗ್ಗು ಎಂಬುವವರ ಟಾಟಾ ಮ್ಯಾಜಿಕ್ ವಾಹನ ಕಲ್ಲುಗುಡ್ಡೆಯಿಂದ ಕಡಬದ ಕಡೆಗೆ ಹೋಗುವಾಗ ಮುಲಿಮಜಲುವಿನಲ್ಲಿ ಆಕಸ್ಮಿಕವಾಗಿ ವಾಹನದಲ್ಲಿ ಬೆಂಕಿ ಕಂಡಿದ್ದು, ತಕ್ಷಣ ಚಾಲಕ ಹಾಗೂ ಪ್ರಯಾಣಿಕರು ವಾಹನದಿಂದ ಹೊರಬಂದಿದ್ದು, ಅದೃಷ್ಟವಶಾತ್ ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಶಾರ್ಟ್ ಸಕ್ರ್ಯೂಟಿನಿಂದ ಬೆಂಕಿ ಹತ್ತಿರಬಹುದು ಎಂದು ಶಂಕಿಸಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا