Urdu   /   English   /   Nawayathi

ನಿಯಂತ್ರಣ ತಪ್ಪಿದ ಕಾರು ಪಲ್ಟಿ

share with us

ಮೂಲ್ಕಿ: 12 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಕಾರ್ನಾಡು  ಬೈಪಾಸ್‌ ಬಳಿಯ ಗುಂಡಾಲು ಗುತ್ತು ಸಮೀಪದ ಹೆದ್ದಾರಿಯಲ್ಲಿ ಬ್ರೇಜಾ ಕಾರೊಂದು  ಚಾಲಕನ ಹತೋಟಿ ತಪ್ಪಿ ಕಾರು ಹೆದ್ದಾರಿ ಪಕ್ಕದ  ಅಲ್ಯುಮಿನಿಯಂ ಗಾರ್ಡ್‌ಗೆ  ಢಿಕ್ಕಿ ಹೊಡೆದು,  ಸುಮಾರು 20 ಅಡಿ ಆಳಕ್ಕೆ ಉರುಳಿ ಬಿದ್ದಿದೆ. ಚಾಲಕನಿಗೆ ತಲೆಸುತ್ತು ಬಂದಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.ಕಾರಿನಲ್ಲಿ ಓರ್ವ ವೃದ್ಧೆ, ಗರ್ಭಿಣಿ ಹಾಗೂ ಚಾಲಕ  ಪ್ರಯಾಣಿಸುತ್ತಿದ್ದರು. ಎದುರಿನ ಸೀಟಿನಲ್ಲಿದ್ದ ಗರ್ಭಿಣಿ  ಮತ್ತು ಚಾಲಕ  ಸೀಟು ಬೆಲ್ಟ್  ಧರಿಸಿದ್ದರಿಂದ  ಗಂಭೀರ ಪ್ರಮಾಣದ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.  ಹಿಂಬದಿಯಲ್ಲಿದ್ದ ವೃದ್ಧೆಯೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇವರೆಲ್ಲರೂ ಕಟಪಾಡಿ ಸಮೀಪದ ಒಂದೇ ಕುಟುಂಬದವರಾಗಿದ್ದು, ಉಡುಪಿ ಕಡೆಗೆ ಸಂಚರಿಸುತ್ತಿದ್ದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا