Urdu   /   English   /   Nawayathi

ಬಲೆಗಳನ್ನು ಹರಿದು ತಮಿಳುನಾಡಿನ ಸುಮಾರು 3 ಸಾವಿರ ಮೀನುಗಾರರನ್ನು ಹಿಮ್ಮೆಟ್ಟಿಸಿದ ಶ್ರೀಲಂಕಾ ನೌಕಪಡೆ

share with us

ರಾಮೇಶ್ವರಂ: 12 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಕಚ್ಚತೀವೀ ಬಳಿ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ ಸುಮಾರು 3 ಸಾವಿರ ಮೀನುಗಾರರನ್ನು ಶ್ರೀಲಂಕಾ ನೌಕಪಡೆ ಹಿಮ್ಮೆಟ್ಟಿಸಿರುವುದಲ್ಲದೇ  ಹಲವು ದೋಣಿಗಳಲ್ಲಿನ ಪರದೆಗಳನ್ನು ಹರಿದು ಹಾಕಲಾಗಿದೆ ಎಂದು ಮೀನುಗಾರಿಕೆ ಸಂಘದ ಮುಖಂಡರು ಹೇಳಿದ್ದಾರೆ. ಸಮುದ್ರ ಮಧ್ಯದಲ್ಲಿ ಯಾಂತ್ರಿಕ ದೋಣಿಯೊಂದನ್ನು ಮುಳುಗಿಸಿದರು ಎಂದು ಅವರು ಆರೋಪಿಸಿದ್ದಾರೆ. ಸೋಮವಾರ ಕಚ್ಚತೀವಿ ಬಳಿ ಸುಮಾರು 549 ದೋಣಿಗಳಲ್ಲಿ ಸಮುದ್ರಗಳಲ್ಲಿ ಮೀನುಗಾರಿಕೆ ನಡೆಸುವಾಗ ಅಲ್ಲಿಗೆ ಬಂದ ಶ್ರೀಲಂಕಾ ನೌಕಪಡೆ ಸಿಬ್ಬಂದಿ ಅಲ್ಲಿಂದ ಮೀನುಗಾರರನ್ನು ಓಡಿಸಿದ್ದಾರೆ ಎಂದು ತಮಿಳುನಾಡು ಯಾಂತ್ರೀಕೃತ ಬೋಟ್ ಸಂಘದ ಅಧ್ಯಕ್ಷ ಪಿ ಸೆಸುರಾಜ ಹೇಳಿದ್ದಾರೆ. ಅಲ್ಲದೇ ಮೀನುಗಾರಿಕೆ ಬಳಸಲಾಗುತ್ತಿದ್ದ 50 ಬೋಟುಗಳ ಪರದೆಗಳನ್ನು ಹರಿದುಹಾಕಿದ್ದಾರೆ. ನಾಲ್ಕು ಮೀನುಗಾರರಿದ್ದ ಬೋಡಿಗೆ ಅವರ ಹಡಗಿನಿಂದ ಡಿಕ್ಕಿ ಹೊಡಿಸಿ ಮುಳುಗಿಸಿದ್ದಾರೆ. ಆ ದೋಣಿಯಲ್ಲಿದ್ದ ನಾಲ್ವರು ಸಮುದ್ರದಲ್ಲಿಯೇ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರನ್ನು ಇತರ ಕೆಲ ಮೀನುಗಾರರು ರಕ್ಷಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆಗ್ನೇಯ ಭಾರತ ಮತ್ತು ಉತ್ತರ ಶ್ರೀಲಂಕಾ ನಡುವಿನ ಬಂಗಾಳ ಕೊಲ್ಲಿಯ ಒಳನಾಡಿನ ಪಾಕ್ ಜಲಸಂಧಿಗಳಲ್ಲಿ ದೀರ್ಘಕಾಲದ ಮೀನುಗಾರಿಕೆಯ ಸಮಸ್ಯೆಗೆ ಪರಿಹಾರ ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ದ್ವೀಪರಾಷ್ಟ್ರದ ಜೊತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا