Urdu   /   English   /   Nawayathi

ಹೆಬಳೆ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿಯ ಕನಸು ಇಂದು ನನಸಾಗಿದೆ

share with us

ಭಟ್ಕಳ: 11 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಭಟ್ಕಳದ ಹೆಬಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಕುರಿತು ಗ್ರಾಮಸ್ಥರು, ಪಂಚಾಯ್ತಿಯ ಮುಖ್ಯಸ್ಥರು ಹಾಗೂ ಕೆಲವು ಸಂಘದವರು ಬಹಳಷ್ಟು ಶ್ರಮ ಪಟ್ಟಿದ್ದರು. ಅವರೆಲ್ಲರ ಶ್ರಮದಿಂದ ಇಂದು ತ್ಯಾಜ್ಯ ವಿಲೇವಾರಿಯ ಕಾರ್ಯ ಯಶಸ್ವಿಯಾಗಿದೆ. ಈ ಹಿಂದೆ ಗ್ರಾಮದಲ್ಲಿ ಕಂಡ ಕಂಡಲ್ಲೆಲ್ಲಾ ರಸ್ತೆಗಳಲ್ಲಿ ತ್ಯಾಜ್ಯ ಕಂಡು ಬರುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿತ್ತು. ಇಂದು ಈ ತೊಂದರೆ ಕೊನೆಯಾಗಿದೆ. ಈ ಕಾರ್ಯಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಪಂಚಾಯ್ತಿಯ ಅಧ್ಯಕ್ಷರಾದ ಎನ್,ಡಿ ಮೊಗೇರ್ ಹಾಗೂ ಮುಖ್ಯಸ್ಥರು ಧನ್ಯವಾದಗಳನ್ನು ಹೇಳುತ್ತಾ ಮುಂದಿನ ದಿನಗಳಲ್ಲಿ ಕಂಡು ಕಂಡ ಕಡೆ ತ್ಯಾಜ್ಯ ಕಂಡು ಬಂದಲ್ಲಿ ಕಸ ಹಾಕುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ತ್ಯಾಜ್ಯವನ್ನು ರಹ್ಮತಾ ಬಾದ್, ಫಿರ್ದೋಸ್ ನಗರ, ಹನೀಫಾ ಬಾದ್, ಮಾಸ್ಟರ್ ಕಾಲೋನಿ, ಆಶ್ರಯ ಕಾಲೋನಿ ಹಾಗೂ ಜಾಮಿಯಾ ಬಾದಿನಿಂದ ವಿಲೇವಾರಿ ಮಾಡಲಾಗುವುದು. ಈ ಕಾರ್ಯಕ್ಕೆ ಹಿಂದೆ ಶ್ರಮ ಪಟ್ಟ ಮದೀನಾ ವೆಲ್ಫೇರ್ ಸಂಘ, ಹನೀಫ್ ವೆಲ್ಫೇರ್ ಸಂಘ, ಫಿರ್ದೋಸ್ ವೆಲ್ಫೇರ್ ಸಂಘ, ಜಾಮಿಯಾ ಸ್ಪೋಟ್ರ್ಸ್ ಸೆಂಟರ್ ಹಾಗೂ ಅಲ್ ಶಮಾ ಸ್ಪೋಟ್ರ್ಸ್ ಸೆಂಟರ್ ಅವರಿಗೆ ಪಂಚಾಯ್ತಿಯ ಮುಖ್ಯಸ್ಥರು ಹಾಗೂ ಸದಸ್ಯರು ಧನ್ಯವಾದಗಳನ್ನು ಹೇಳುತ್ತಾ, ವಿಲೇವಾರಿಗೆ ವಾಹನದ ಸೌಲಭ್ಯವನ್ನು ವದಗಿಸಿಕೊಟ್ಟ ವುಮೆನ್ಸ್ ಸೆಂಟರ್ ಅವರಿಗೂ ವಂದಿಸಿದರು. ತ್ಯಾಜ್ಯ ವಿಲೇವಾರಿಗೆ ಪ್ರತಿಯೊಂದು ಮನೆಯವರು 70 ರೂಪಾಯಿಯ ಶುಲ್ಕವನ್ನು ಪಾವತಿಸಲು ನಿಗದಿಪಡಿಸಲಾಗಿದೆ ಎಂದು ಹೇಳಿದರು.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا