Urdu   /   English   /   Nawayathi

ಜಾರ್ಖಂಡ್​ನಲ್ಲಿ ಸುಳ್ವಾಡಿಯಂತ ಪ್ರಕರಣ: ಪ್ರಸಾದ ತಿಂದು 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

share with us

ಲೋಹಾರ್​ದಗ(ಜಾರ್ಖಂಡ್​): 11 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಕರ್ನಾಟಕದ ಚಾಮರಾಜನಗರ ಜಿಲ್ಲೆ ಮಾರೆಮ್ಮ ದೇವಸ್ಥಾನದಲ್ಲಿ ನಡೆದ ಪ್ರಕರಣ ಹೋಲುವಂತಹುದೇ ಪ್ರಕರಣ ಜಾರ್ಖಂಡ್​​ನಲ್ಲಿ ನಡೆದಿದೆ. ಇಲ್ಲಿನ ದೇವಸ್ಥಾನವೊಂದರಲ್ಲಿ ಬಸಂತ್​ ಪಂಚಮಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದ 40ಕ್ಕೂ ಹೆಚ್ಚು ಶಾಲಾ ಮಕ್ಕಳು ಪ್ರಸಾದ ಸೇವಿಸಿದ ನಂತರ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ಮಾತನಾಡಿರೋ ಅಧಿಕಾರಿಗಳು, ಘಟನೆಗೆ ಸರಿಯಾದ ಕಾರಣ ಏನೆಂದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಸಾದದ ಮಾದರಿಯನ್ನ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಘಟನೆಗೆ ಕಾರಣ ತಿಳಿಯಲಿದೆ ಎಂದಿದ್ದಾರೆ.

View image on TwitterView image on TwitterView image on Twitter

ANI✔@ANI

Jharkhand: 40 students fell ill after consuming 'prasad' at a school in Lohardaga. S S Khalid, Doctor, Sadar hospital says, "40 children have come here till now, one or two are in critical condition. It is a case of food poisoning, we are treating them accordingly." (10/2)

31

6:04 AM - Feb 11, 2019

See ANI's other Tweets

Twitter Ads info and privacy

ಕೆಲ ತಿಂಗಳ ಹಿಂದೆಯಷ್ಟೆ ರಾಜ್ಯದ ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಪ್ರಸಾದ ಸೇವಿಸಿ ಹಲವು ಮಂದಿ ಜೀವ ಕಳೆದುಕೊಂಡಿದ್ದರು. ಇದೀಗ ಅಂತದ್ದೇ ಘಟನೆ ಜಾರ್ಖಂಡ್​ನಲ್ಲಿ ನಡೆದಿದ್ದು, ಜನರು ಪ್ರಸಾದ ಸೇವಿಸಲು ಹಿಂಜರಿಯುವಂತ ಸ್ಥಿತಿ ನಿರ್ಮಾಣವಾಗಿದೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا