Urdu   /   English   /   Nawayathi

'ಆಡಿಯೋ ಕ್ಲಿಪ್​ನಿಂದ ಬಿಜೆಪಿ ಬಣ್ಣ ಬಯಲು, ಮೈತ್ರಿ ಸರ್ಕಾರ ಮುಟ್ಟೋಕಾಗಲ್ಲ: ಖರ್ಗೆ ಖಡಕ್‌ ಸಂದೇಶ

share with us

ನವದೆಹಲಿ: 09 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಮೈತ್ರಿ ಸರ್ಕಾರವನ್ನ ಅಸ್ಥಿರಗೊಳಿಸೋದಕ್ಕಾಗಿಯೇ ಬಿಜೆಪಿ ಆಪರೇಷನ್‌ ಕಮಲ ನಡೆಸ್ತಿದೆ. ಆಪರೇಷನ್ ಕಮಲದ ಆಡಿಯೋ ರಿಲೀಸಾಗಿರುವುದರಿಂದ ಬಿಜೆಪಿ ಬಣ್ಣ ಈಗ ಬಯಲಾಗಿದೆ, ಅವರ ಹುಳುಕೆಲ್ಲವೂ ಹೊರಬಂದಿದೆ ಅಂತ ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಕಿಡಿ ಕಾರಿದ್ದಾರೆ. ಇವತ್ತು ನವದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮೈತ್ರಿ ಸರ್ಕಾರ ಸ್ಥಿರವಾಗಿದೆ. ಇದರಿಂದ ಬಿಜೆಪಿ ಮುಖಂಡರು ಹತಾಷರಾಗಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್​ ಹಾಗೂ ಕಾಂಗ್ರೆಸ್​ ಮೈತ್ರಿ ಸರ್ಕಾರವನ್ನ ಕೆಡವಲು ಬಿಜೆಪಿ ಹವಣಿಸುತ್ತಿದೆ. ಆದರೆ ಎಲ್ಲಾ ಎಂಎಲ್​ಎಗಳೂ ನಮ್ಮೊಂದಿಗಿದ್ದು, ಮುಂದಿನ ದಿನಗಳಲ್ಲಿ ಅವರು ನಮ್ಮೊಂದಿಗೇ ಇರಲಿದ್ದಾರೆ ಅಂತ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

View image on Twitter

ANI✔@ANI

Mallikarjun Kharge, Congress on audio clips released by Karnataka CM y'day: Everything has come out. They (BJP) are frustrated.They want to pull down Congress&JD(S) coalition govt by any means.But our MLAs are strong & the government would remain strong. Nobody can do anything

83

4:08 PM - Feb 9, 2019

37 people are talking about this

Twitter Ads info and privacy

ಅಷ್ಟೇ ಅಲ್ಲ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸಮ್ಮಿಶ್ರ ಸರ್ಕಾರವನ್ನ ಯಾರಿಂದಲೂ ಟಚ್​ ಮಾಡಲೂ ಸಹ ಸಾಧ್ಯವಿಲ್ಲ ಅಂತ ಖರ್ಗೆ ಖಡಕ್‌ ಆಗಿಯೇ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರವನ್ನ ಬೀಳಿಸುವ ಉದ್ದೇಶದಿಂದ ಬಿಜೆಪಿ ನಡೆಸಿದೆ ಎನ್ನಲಾದ ಆಪರೇಷನ್​ ಕಮಲದ ಆಡಿಯೋ ತುಣುಕುವೊಂದನ್ನ ನಿನ್ನೆ ಬಜೆಟ್​ ಅಧಿವೇಶನಕ್ಕೂ ಮುನ್ನ ಸಿಎಂ ಹೆಚ್​ಡಿ ಕುಮಾರಸ್ವಾಮಿ ರಿಲೀಸ್​ ಮಾಡಿದ್ದರು. ಇದು ಆಡಳಿತ ಮತ್ತು ವಿಪಕ್ಷ ನಾಯಕರ ಮಧ್ಯೆ ಕೆಸರೆರಚಾಟಕ್ಕೂ ಕಾರಣವಾಗಿತ್ತು. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا