Urdu   /   English   /   Nawayathi

ಜನರು ಕಾನೂನುಬದ್ದವಾಗಿ ಅಮೆರಿಕಾ ಪ್ರವೇಶಿಸಲಿ, ಅರ್ಹತೆ ಆಧಾರಿತ ವಲಸೆಗೆ ತಾನು ಕಟಿಬದ್ದ: ಡೊನಾಲ್ಡ್ ಟ್ರಂಪ್

share with us

ವಾಷಿಂಗ್ಟನ್: 07 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತನ್ನ ವಾರ್ಷಿಕ ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಮಾತನಾಡುತ್ತಾ ಅರ್ಹತೆ ಆಧಾರಿತ ವಲಸೆ ಬಗ್ಗೆ ತಮ್ಮ ಬಲವಾದ ಬದ್ದತೆಯನ್ನು ಪುನರುಚ್ಚರಿಸಿದ್ದಾರೆ.ಕಾನೂನುಬದ್ದ ವಲಸಿಗರು ಅಸಂಖ್ಯಾತ ಸಂಖ್ಯೆಯಲ್ಲಿ ಅಮೆರಿಕಾದಲ್ಲಿದ್ದು ಅವರು ಯುಎಸ್ ಅನ್ನು ಶ್ರೀಮಂತಗೊಳಿಸಿದ್ದಾರೆ.ನೂರಾರು ಸಾವಿರ ಭಾರತೀಯ ಐಟಿ ವೃತ್ತಿಪರರು ನಮ್ಮ ಭರವಸೆಯನ್ನು ಎತ್ತರಿಸಿದ್ದಾರೆ. ಆದರೆ ಅಮೆರಿಕಾದ ಪ್ರಸ್ತುತ ವಲಸೆ ನೀತಿಯಿಂದ ಇಂತಹಾ ವೃತ್ತಿಪರರಿಗೆ ಭಾರೀ ಆಘಾತವಾಗಿದೆ. ಅಮೇರಿಕಾದಲ್ಲಿ ನೆಲೆಸ್ದ ಹೆಚ್ಚುಇನ ಭಾರತೀಯ ಐಟಿ ಉದ್ಯೋಗಿಗಳು ವೃತ್ತಿಪರರಾಗಿದ್ದು ಅವರು ಮುಖ್ಯವಾಗಿ H-1B ವೀಸಾಗಳಲ್ಲಿಯುಎಸ್ ನಲ್ಲಿ ವಾಸವಿದ್ದಾರೆ. ಆದರೆ ಈಗ ಅಮೆರಿಕಾ ಜಾರಿಗೆ ತರಲಿರುವ ವಲಸೆ ನೀತಿಯಂತೆ ಒಂದು ರಾಷ್ಟ್ರದ ಶೇ.ಏಳರಷ್ಟು ಮಂದಿಗೆ ಮಾತ್ರ ಗ್ರೀನ್ ವೀಸಾದಡಿ ಅಮೆರಿಕಾದಲ್ಲಿ ಖಾಯಂ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. "ನಮ್ಮ ನಾಗರಿಕರ ಜೀವನ ಮತ್ತು ಉದ್ಯೋಗಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪರಿವರ್ತಿತ ವಲನೆ ನೀತಿಯನ್ನು ರಚಿಸಲು ನಾವು ಬದ್ದರಾಗಿದ್ದೇವೆ." ಟ್ರಂಪ್ ಹೇಳಿದ್ದಾರೆ.

ತಜ್ಞರ ಪ್ರಕಾರ, ದಶಕಗಳ-ಹಳೆಯ ವೈವಿಧ್ಯತೆಯ ವೀಸಾ ನೀತಿಯು ಸಾಮಾನ್ಯವಾಗಿ ಅರ್ಹತೆ-ಆಧಾರಿತ ವ್ಯವಸ್ಥೆಯಿಂದ ಯುಎಸ್ಗೆ ಆಗಮಿಸಲು ಸಾಧ್ಯವಾಗದವರಿಗೆ ಸಹ ಅಮೆರಿಕಾಗೆ ಬರಲು ಅವಕಾಶ ಕಲ್ಪಿಸಿತ್ತು.ಇದಾಗಲೇ ಟ್ರಂಪ್ ಅಮೆರಿಕಾದಲ್ಲಿ  ವೇಗವಾಗಿ ಮತ್ತು ಸುಲಭವಾದ ವಲಸೆ ಮಾರ್ಗವನ್ನು ಮುಚ್ಚಿ ಕಾನೂನುಬದ್ದ ವಲಸೆಗಾಗಿ ಕ್ರಮ ತೆಗೆದುಕೊಂಡಿದ್ದಾರೆ. ಇದೇ ಪ್ರಕಾರ ಕಾನೂನುಬದ್ದ ವಲಸೆ ನೀತಿಯಡಿ ಹಸಿರು ಕಾರ್ಡು ಹೊಂದಿರುವ ಭಾರತೀಯರಿಗೆ  70 ವರ್ಷ ಕಾಲ ಅಮೆರಿಕಾದಲ್ಲಿ ನೆಲೆಸಲು ಅವಕಾಶವಿರಲಿದೆ ಎಂದು , ಅಧಿಕೃತ ವರದಿ ಹೇಳಿದೆ. ಗ್ರೀನ್ ಕಾರ್ಡ್ ಹೊಂದಿರುವ ವ್ಯಕ್ತಿಯು ಯುಎಸ್ನಲ್ಲಿ ಶಾಶ್ವತವಾಗಿ ವಾಸಿಸಲು ಮತ್ತು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಸ್ಟೇಟ್ ಆಫ್ ಯೂನಿಯನ್ ಭಾಷಣಯುಎಸ್ ಅಧ್ಯಕ್ಷರ ಸಾಂಪ್ರದಾಯಿಕ ವಾರ್ಷಿಕ ಭಾಷಣವಾಗಿದ್ದು, ಕಾಂಗ್ರೆಸ್ ನ  ಜಂಟಿ ಅಧಿವೇಶನದಲ್ಲಿ ಅವರು ದೇಶದಲ್ಲಿನ ಪ್ರಸಕ್ತ ಪರಿಸ್ಥಿತಿ ಬಗ್ಗೆ  ಮಾತನಾಡುತಾರೆ. "ಜನರು ನಮ್ಮ ದೇಶಕ್ಕೆ ಬರಬೇಕೆಂದು ನಾನು ಬಯಸುತ್ತೇನೆ, ಆದರೆ ಅವರು ಕಾನೂನುಬದ್ಧವಾಗಿ ಬರಬೇಕಾಗಿದೆ" ಎಂದು ಟ್ರಂಪ್ ಹೇಳೀದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا